ಬೆಂಗಳೂರು: ಟಿಪ್ಪು (Tippu Sultan) ಹಿಂದೂಗಳ ರಕ್ತ ಹರಿಸಿದ ನೆಲ ಸುಲ್ತಾನ್ ಬತ್ತೇರಿಯಿಂದಲೇ ರಾಹುಲ್‌ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರೆ (Bharath Jodo Yatra) ರಾಜ್ಯಕ್ಕೆ ಪ್ರವೇಶಿಸುತ್ತಿದೆ. ಇದು ಕಾಂಗ್ರೆಸ್ (Congress) ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಟಿಪ್ಪುವಿನ ಮತಾಂಧತೆಗೆ ಹಿಂದೂಗಳ ರಕ್ತ ಹರಿದಿರುವ ನೆಲ ಸುಲ್ತಾನ್ ಬತ್ತೇರಿ. ಇಲ್ಲಿಂದಲೇ ರಾಹುಲ್ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿ.
ಬನ್ನಿ, ಸುಲ್ತಾನ್ ಬತ್ತೇರಿ ಬಗ್ಗೆ ತಿಳಿಯೋಣ.#Rahulkaala #SonsofTipu #BharatTodoYatra #GoBackRahul pic.twitter.com/NC8E8PEq6u
— BJP Karnataka (@BJP4Karnataka) September 30, 2022
Advertisement
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕುರಿತು ಟ್ವೀಟ್ ಮಾಡಿರುವ ಬಿಜೆಪಿ (BJP), ಕಾಂಗ್ರೆಸ್‌ಗೆ ಇಂದಿನಿಂದ ರಾಹುಕಾಲ ಆರಂಭವಾಗಿದೆ ಎಂದು ಟೀಕಿಸಿದೆ. ಸುಲ್ತಾನ್ ಬತ್ತೇರಿಯಿಂದ ರಾಹುಲ್ ಗಾಂಧಿ ಯಾತ್ರೆ ಆರಂಭ ಹಿನ್ನೆಲೆಯಲ್ಲಿ ಟಿಪ್ಪು ನಡೆಸಿದ ಮಾರಣ ಹೋಮ ಕುರಿತು ವೀಡಿಯೋ ಸಹ ರಿಲೀಸ್ ಮಾಡಿದೆ. ಇದನ್ನೂ ಓದಿ: ಪಾದಯಾತ್ರೆ ಅಂದ್ರೆ ನಮ್ ತಾಯಾಣೆ ಹೀಗೆ ಅಂತ ಗೊತ್ತಿರಲಿಲ್ಲ: ಸೋಮಣ್ಣ ವ್ಯಂಗ್ಯ
Advertisement
Advertisement
ಟ್ವೀಟ್‌ನಲ್ಲಿ ಏನಿದೆ?
ಕಾಂಗ್ರೆಸ್‌ಗೆ ಇಂದಿನಿಂದ ರಾಹುಕಾಲ ಆರಂಭವಾಗಿದೆ. ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದ್ದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ. ಇದನ್ನೂ ಓದಿ: ಕರ್ನಾಟಕವನ್ನು PFI ಫೈನಾನ್ಸಿಯಲ್ ಹಬ್ ಮಾಡಿದ್ದು ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ
Advertisement
ಟಿಪ್ಪು ಮತಾಂಧತೆಗೆ ಹಿಂದೂಗಳ ರಕ್ತ ಹರಿಸಿರುವ ನೆಲ ಸುಲ್ತಾನ್ ಬತ್ತೇರಿ. ಇಲ್ಲಿಂದಲೇ ರಾಹುಲ್ ಯಾತ್ರೆ ರಾಜ್ಯಕ್ಕೆ ಪ್ರವೇಶ ಮಾಡುತ್ತಿರುವುದು. ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಬನ್ನಿ, ಸುಲ್ತಾನ್ ಬತ್ತೇರಿ ಬಗ್ಗೆ ತಿಳಿಯೋಣ ಬನ್ನಿ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ.#Rahukaala#SonsOfTipu#BharatTodoYatra#GoBackRahul pic.twitter.com/V34xXY4d3u
— BJP Karnataka (@BJP4Karnataka) September 30, 2022
ಸಾಮಾಜಿಕ ಜಾಲತಾಣದ (Social Media) ಮೂಲಕ ದೇಶ ವಿಭಜಕ ಕಾಂಗ್ರೆಸ್ ಎಂಬ ಪೋಸ್ಟರ್ ಹರಿಬಿಟ್ಟ ಬಿಜೆಪಿ, ದೇಶ ವಿಭಜಕ ಕಾಂಗ್ರೆಸ್ (Congress), ದೇಶ ಒಡೆದ ಕುಟುಂಬದ ಕುಡಿ. ದೇಶ ಒಡೆದ ಮುತ್ತಜ್ಜನ ಪಾಪ ಕಳೆಯಲು ಮರಿಮೊಮೊಮ್ಮಗ ನಾಟಕದ ಯಾತ್ರೆ ನಡೆಸುತ್ತಿದ್ದಾರೆ. ಅಖಂಡ ಭಾರತ ಒಪ್ಪದ ಕಾಂಗ್ರೆಸಿಗರು ತುಕ್ಡೆ-ತುಕ್ಡೆ ಗ್ಯಾಂಗಿನ ಪೋಷಕರು, ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಪ್ರಧಾನಿ ಹುದ್ದೆ ತಪ್ಪಿಸಿದ್ರು, ಅಧಿಕಾರಕ್ಕಾಗಿ ದೇಶ ವಿಭಜಸಿದ ನೆಹರು, ಕಾಶ್ಮೀರವನ್ನೇ ಪ್ರತ್ಯೇಕವಾಗಿಟ್ಟರು ಈಗ ಭಾರತ ಜೋಡೋ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದೆ.