ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಸುತ್ತಿನ ಕೈಗಡಿಯಾರ ಗುದ್ದಾಟ ಜೋರಾಗಿದೆ. ಈ ಹಿಂದೆ ಸಿದ್ದರಾಮಯ್ಯರ ಹ್ಯೂಬ್ಲೋಟ್ ವಾಚ್ ವಿವಾದವಾಗಿತ್ತು. ಇದೀಗ ಸಿಎಂ-ಡಿಸಿಎಂ ಕಟ್ಟಿರುವ ದುಬಾರಿ 24 ಲಕ್ಷ ಮೌಲ್ಯದ ಕಾರ್ಟಿಯಾರ್ ವಾಚ್ (Cartier Watches) ವಾರ್ ನಡೆಯುತ್ತಿದೆ.
ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಿಷಯ ಪ್ರಸ್ತಾಪಿಸಿದ್ದು, ಡಿಕೆಶಿ ಹಾಕಿರೋ ಕಾರ್ಟಿಯರ್ ವಾಚ್ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ತೋರಿಸಿಲ್ಲ ಅಂತ ದಾಖಲೆ ತೋರಿಸಿದ್ದಾರೆ. ಡಿಕೆಶಿ 23.90 ಲಕ್ಷ ರೂ. ಮೌಲ್ಯದ ಹ್ಯೂಬ್ಲೋಟ್ ವಾಚ್ ಹಾಗೂ 9 ಲಕ್ಷ ರೂ. ಬೆಲೆಯೆ ರೊಲೆಕ್ಸ್ ವಾಚ್ ಬಗ್ಗೆಯಷ್ಟೇ ಮಾಹಿತಿ ಕೊಟ್ಟಿದ್ದಾರೆ. ಚುನಾವಣಾ ಆಯೋಗಕ್ಕೂ ಜನರಿಗೂ ಡಿಕೆಶಿ ಸುಳ್ಳು ಹೇಳಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಡಿಸಿಎಂ-ಸಿಎಂ ಹಾಕಿರೋ ಕಾರ್ಟಿಯಾರ್ ವಾಚ್‌ಗೆ 43 ಲಕ್ಷ, ಅದರ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಂಬರುವ ವಿಧಾನಸಭೆ ಚುನಾವಣೆಗೆ ಬಿವೈವಿ ನೇತೃತ್ವ ಬೇಡ – ರಾಜ್ಯ ಬಿಜೆಪಿ ಉಸ್ತುವಾರಿ ಮುಂದೆ ಭಿನ್ನ ನಾಯಕರ ಅಳಲು
ಇದೇ ವೇಳೆ, ಸಿದ್ದರಾಮಯ್ಯ ಬಳಿ 18 ವಾಚ್‌ಗಳು ಇದೆಯಂತೆ. ಸಿದ್ದರಾಮಯ್ಯ ಹಾಕುವ ಒಂದೊಂದು ಶೂ ಬೆಲೆ ಲಕ್ಷ ರೂಪಾಯಿ. ನೀವು ಎಷ್ಟಾದರೂ ವಾಚ್ ಹಾಕಿ. ಆದರೆ, ಜನಕ್ಕೆ ಲೆಕ್ಕ ಕೊಡಿ. ಸಿಎಂ-ಡಿಸಿಎಂ ಇಬ್ಬರದ್ದೂ ಒಂದೇ ವಾಚ್ ಆಗಿರಬೋದು. ಆದರೆ, ಇಬ್ಬರ ಸಮಯ ಒಂದೇ ಅಲ್ಲ ಅಂದಿದ್ದಾರೆ. ಇದಕ್ಕೆ ಡಿಕೆಶಿ ಕೌಂಟರ್ ಕೊಟ್ಟಿದ್ದು, ನನ್ನ ಅಫಿಡವಿಟ್ ನನಗೆ ಗೊತ್ತು. ಅವನಿಗೇನ್ ಗೊತ್ತು? ನಾನು ಕ್ರೆಡಿಟ್ ಕಾರ್ಡ್ನಲ್ಲಿ ಖರೀದಿಸಿದ್ದನ್ನೂ ತೋರಿಸಿದ್ದೇನೆ. ಅವರ ಮನೆಯಿಂದಲೇ ಕದ್ದಿದ್ದೇನೆ ಅಂತ ಕಾಮಿಡಿಯೂ ಮಾಡಿದ್ದಾರೆ.
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಾರ್ಯಕ್ರಮದಲ್ಲಿ ಡಿಕೆಶಿ ತನ್ನ ಕೈಯಲ್ಲಿ ಇದ್ದ 24 ಲಕ್ಷದ ಕಾರ್ಟಿಯರ್ ವಾಚ್ ಬಿಚ್ಚಿ ಹೆಚ್.ಕೆ.ಪಾಟೀಲ್ ಕೈಗೆ ಕೊಟ್ಟಿದ್ದಾರೆ. ವಾಚ್ ನೋಡಿದ ಹೆಚ್‌ಕೆ ಪಾಟೀಲ್ ವಾಪಸ್ ಕೊಟ್ಟಿದ್ದಾರೆ. ಇನ್ನು, ಮೋದಿ 10 ಲಕ್ಷದ ಸೂಟ್ ಹಾಕ್ತಾರೆ. ಅಫಿಡವಿಟ್ ಸಲ್ಲಿಸುತ್ತಾರಾ? ಅಂತ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ಈ ಮಧ್ಯೆ, ಈ ಸರ್ಕಾರದಲ್ಲಿ 60% ಅಲ್ಲ, 63% ಭ್ರಷ್ಟಾಚಾರ ಇದೆ ಅಂತ ವಿಪಕ್ಷ ನಾಯಕ ಅಶೋಕ್ ಆರೋಪಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿಯ ಸಮಸ್ಯೆಗಳ ಬಗ್ಗೆ ಕೇಂದ್ರದ ಮುಂದಿಟ್ಟ ಕೆ.ಸುಧಾಕರ್


