ಕೊತ್ವಾಲ್ ಬ್ರದರ್ಸ್ ‘ಆ ದಿನಗಳ’ ಗೂಂಡಾಗಿರಿ ಮುಂದುವರೆಸಿದ್ದಾರೆ: ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ

Public TV
2 Min Read
BJP DKSHI

ಬೆಂಗಳೂರು: ತುಮಕೂರಿನಲ್ಲಿ (Tumakuru) ತೋಟ ಸುಟ್ಟ ಪ್ರಕರಣದಲ್ಲಿ ಜಟಾಪಟಿ ಮುಂದುವರಿದಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕೊತ್ವಾಲ್ ಬ್ರದರ್ಸ್ ‘ಆ ದಿನಗಳ’ ಗೂಂಡಾಗಿರಿ ಮುಂದುವರೆಸಿದ್ದಾರೆ ಎಂದು ಕಿಡಿಕಾರಿದೆ.

ತೋಟವನ್ನು ಸುಟ್ಟವರು ನಾವು, ನಿನ್ನನ್ನೂ ಸುಟ್ಟು ಹಾಕುವುದು ಕಷ್ಟವೇ ಎಂದು ಧಮ್ಕಿ ಹಾಕಿ ಈಗ ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಕೊತ್ವಾಲ್ ಬ್ರದರ್ಸ್. ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ಗಂಡೆದೆ ಇದ್ದರೆ ನೇರವಾಗಿ ಹೋರಾಡಿ. ಅದು ಬಿಟ್ಟು ಸೋಲುವ ಪುಕ್ಕಲತನದಲ್ಲಿ ಹೇಡಿಯಂತೆ ಪೊಲೀಸರನ್ನು ಬಳಸಿಕೊಂಡು ಅಮಾಯಕ ರೈತರನ್ನು ಬೆದರಿಸಬೇಡಿ ಎಂದು ಎಕ್ಸ್ನಲ್ಲಿ ಪೋಸ್ಟ್ ಹಾಕಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ‌ಮಾಡಿದ್ದೇನೆ: ಈಶ್ವರಪ್ಪ

ಅಧಿಕಾರವಿದೆ, ರೌಡಿಗಳ ಬಳಗವಿದೆ, ಹಣವಿದೆ ಎಂದು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯಲಿದ್ದೇವೆ ಎಂದು ‘ಗುಲಾಮಿ ಕೊತ್ವಾಲ್ ಗ್ಯಾಂಗ್’ ತೋರಿಸಿಕೊಟ್ಟಿದೆ ಎಂದು ಟೀಕಿಸಿದೆ.

ಸುರ್ಜೇವಾಲಾ ಹೇಳಿಕೆ ಕುರಿತು ಪೋಸ್ಟ್ ಮಾಡಿ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರ ಮಹಿಳೆಯ ಕುರಿತ ಅಶ್ಲೀಲ ಹೇಳಿಕೆಗೆ ಅವರನ್ನು ಚುನಾವಣಾ ಆಯೋಗವು ಆಯೋಗವು ಚುನಾವಣಾ ಪ್ರಚಾರದಿಂದ ಬ್ಯಾನ್ ಮಾಡಿದೆ. ಇಷ್ಟಾದರೂ ಕಾಂಗ್ರೆಸ್ ಮೌನವಾಗಿದೆ. ಇದುವರೆಗೂ ಕ್ಷಮೆ ಕೇಳಿಲ್ಲ. ಪದೇ ಪದೆ ಕಾಂಗ್ರೆಸ್ಸಿಗರು ಮಹಿಳೆಯರನ್ನು ಅವಮಾನಿಸುತ್ತಿದ್ದರೂ, ಯುವರಾಜ ರಾಹುಲ್ ಗಾಂಧಿ ಅವರು ಕೈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿರಲಿ, ಈ ಬಗ್ಗೆ ಮಾತೇ ಆಡುತ್ತಿಲ್ಲ. ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರೇ, ರಾಜ್ಯದಲ್ಲಿ ಭಾಷಣ ಮಾಡಲು ನಿಮಗೆ ಯಾವ ಯೋಗ್ಯತೆ ಇದೆ? ನಾಡಿನ ಸ್ವಾಭಿಮಾನಿ ಮಹಿಳೆಯರು ನಿಮ್ಮನ್ನು ಕೇಳುತ್ತಿದ್ದಾರೆ ಉತ್ತರಿಸಿ. ಸುರ್ಜೇವಾಲಾ ಅವರ ಹೇಳಿಕೆಯನ್ನು ನೀವು ಬೆಂಬಲಿಸುತ್ತಿರೋ? ಸ್ತ್ರೀಯನ್ನು ಕೀಳಾಗಿ ಕಾಣುವುದೇ ಕಾಂಗ್ರೆಸ್ಸಿನ ಗ್ಯಾರಂಟಿಯೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ರಾಮಮಂದಿರದಲ್ಲಿ ಅದ್ಧೂರಿ ರಾಮನವಮಿ – ಮದುವಣಗಿತ್ತಿಯಂತೆ ಶೃಂಗಾರಗೊಂಡ ಅಯೋಧ್ಯೆ

Share This Article