ಹೈದರಾಬಾದ್: ಸರ್ಜಿಕಲ್ ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಪುರಾವೆ ತೋರಿಸಿ ಎಂದು ಕೇಳಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಕೆಸಿಆರ್ ಒಬ್ಬ ಪಾಕಿಸ್ತಾನ, ಚೀನಾ ಏಜೆಂಟ್ ಎಂದು ಗುಡುಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ದೇಶದ್ರೋಹಿಯಂತೆ ಮಾತನಾಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಚೀನಾದ ಏಜೆಂಟ್ ಆಗಿರುವ ನಿಮ್ಮಂತಹ ದೇಶದ್ರೋಹಿ ತೆಲಂಗಾಣ ನೆಲದಲ್ಲಿರಲು ಅರ್ಹರಲ್ಲ. ತೆಲಂಗಾಣ ಜನತೆ ನಿಮ್ಮನ್ನು ಓಡಿಸುವುದು ಖಚಿತ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ರಾಹುಲ್ ವಿರುದ್ಧ ಹಿಮಂತ ಬಿಸ್ವಾ ವಿವಾದಾತ್ಮಕ ಹೇಳಿಕೆ – ತೆಲಂಗಾಣ ಕಾಂಗ್ರೆಸ್ ನಾಯಕರಿಂದ ದೂರು
Advertisement
Advertisement
ಮುಖ್ಯಮಂತ್ರಿಗಳ ಹೇಳಿಕೆಗಳು ಜನರನ್ನು ಕೆರಳಿಸಿದ್ದು, ಅವರ ರಕ್ತ ಕುದಿಯುತ್ತಿದೆ. ಕೆಸಿಆರ್ ಅವರು ಭಾರತೀಯ ಸೇನೆಗೆ ಮಾಡಿದ ಅವಮಾನಕ್ಕೆ ಇಡೀ ಭಾರತವೇ ತಲೆತಗ್ಗಿಸುವಂತಾಗಿದೆ ಎಂದು ಹರಿಹಾಯ್ದಿದ್ದಾರೆ.
Advertisement
ಸರ್ಜಿಕಲ್ ಸ್ಟ್ರೈಕ್‌ಗೆ ಸಂಬಂಧಿಸಿದ ಸಾಕ್ಷ್ಯವನ್ನು ಕೇಂದ್ರ ಸರ್ಕಾರ ತೋರಿಸಲಿ. ಈ ವಿಚಾರವಾಗಿ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮೊದಲು ಅವರು ಜನತೆಗೆ ಪುರಾವೆ ತೋರಿಸಲಿ ಎಂದು ಕೆಸಿಆರ್ ಆಗ್ರಹಿಸಿದ್ದರು. ಇದನ್ನೂ ಓದಿ: ಬಂಡಾಯ ಗುಂಪುಗಳ ಜೊತೆ ಮಾತನಾಡಲು ಸರ್ಕಾರ ಸಿದ್ಧವಿದೆ: ರಾಜನಾಥ್ ಸಿಂಗ್
Advertisement
ಉರಿಯ ಮೂಲ ಶಿಬಿರದಲ್ಲಿ ಭಾರತೀಯ ಸೇನೆಯ 19 ಯೋಧರು ಹತರಾದ ನಂತರ ಭಾರತೀಯ ಸೇನೆಯು 2016ರ ಸೆಪ್ಟೆಂಬರ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.
ಬಳಿಕ 2019ರ ಫೆ.14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 40 ಯೋಧರು ಹುತಾತ್ಮರಾದರು. ಪುಲ್ವಾಮಾ ದಾಳಿಯ ಮೂರನೇ ವರ್ಷಾಚಾರಣೆ ನಿನ್ನೆ ನಡೆಯಿತು. ದೇಶದ ಜನತೆ ಹುತಾತ್ಮ ಯೋಧರನ್ನು ಸ್ಮರಿಸಿದ್ದರು.
ಸ್ಮರಿಸಿ