Bengaluru CityKarnatakaLatestMain Post

ಲಕ್ಕಿಡಿಪ್‍ನಲ್ಲಿ ಗೆದ್ದರೂ, ಸೋತರೂ ಅಳುತ್ತೇನೆ ನಾನ್ಯಾರು ಬಲ್ಲಿರಾ!? – ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ: ಬಿಜೆಪಿ

Advertisements

ಬೆಂಗಳೂರು: ಲಕ್ಕಿಡಿಪ್‍ನಲ್ಲಿ ಗೆದ್ದರೆ ಆಳುತ್ತೇನೆ. ಸೋತರೆ ಅಳುತ್ತೇನೆ. ಲಕ್ಕಿ ಡಿಪ್ ಸಿಎಂ ಎಂದು ಕರೆದರೆ ಉರಿದು ಬೀಳುತ್ತೇನೆ, ಮೈ ಪರಚಿಕೊಳ್ಳುತ್ತೇನೆ. ನಾನ್ಯಾರು ಬಲ್ಲಿರಾ!? ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುರಿತಾಗಿ ಬಿಜೆಪಿ ಟ್ವಿಟ್ಟರ್ ಮೂಲಕ ವ್ಯಂಗ್ಯವಾಡಿದೆ.

ಟ್ವೀಟ್‍ನಲ್ಲಿ ಏನಿದೆ?
ಕುಮಾರಸ್ವಾಮಿ ಅವರೇ, ಎರಡು ಬಾರಿ ನಿಮಗೆ ಅದೃಷ್ಟ ಚೀಟಿಯ ಮೂಲಕ ಸಿಎಂ ಆಗಿದ್ದೀರಿ. ಎರಡಂಕಿಯ ಶಾಸಕರನ್ನು ಹಿಡಿದುಕೊಂಡು ಎರಡೆರಡು ಬಾರಿ ಚೀಟಿಯ ಮೂಲಕ ಮುಖ್ಯಮಂತ್ರಿಯಾಗುವುದು ಅಪೂರ್ವ ಸಂಗತಿ. ನೀವು ಅದೃಷ್ಟವಂತರು! ಇದನ್ನೂ ಓದಿ: ಚಾಮುಂಡಿ ಬೆಟ್ಟ ರೋಪ್ ವೇ ನಿರ್ಧಾರ ಕೈ ಬಿಟ್ಟ ಜಿಲ್ಲಾಡಳಿತ

ಹಲವು ಜಿಲ್ಲೆಗಳ ಬೆಂಬಲಿಗರಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಆಹ್ವಾನ ವಿಚಾರವಾಗಿ ಸಿದ್ದರಾಮಯ್ಯರನ್ನು ಟ್ವೀಟ್ ಮೂಲಕ ಕಾಲೆಳೆದ ಬಿಜೆಪಿ, ಬಾದಾಮಿ ಕ್ಷೇತ್ರಕ್ಕೆ ಓಡಾಡುವುದು ಸಿದ್ದರಾಮಯ್ಯ ಅವರಿಗೆ ಕಷ್ಟವಾಗುತ್ತದೆಯಂತೆ! ಕೋಲಾರಕ್ಕೆ ಬನ್ನಿ ಎಂಬುದು ರಮೇಶ್ ಕುಮಾರ್ ಬಳಗದ ಆಗ್ರಹವಂತೆ! ನಿದ್ದೆ ಮಾಡುವವನಿಗೆ ಹಾಸಿಗೆ ನೀಡಿದ ಹಾಗಿದೆ ಅಹ್ವಾನಗಳು! ಇದನ್ನೂ ಓದಿ: ನೋಡಲ್ಲ ಅಂದ್ರೆ ಮುಖ ನೋಡಲ್ಲ, ಮಾತಾಡಲ್ಲ ಅಂದ್ರೆ ಮಾತಾಡಲ್ಲ ಅಷ್ಟೇ – ಇದು ಸಿದ್ದು ವರಸೆ

ಸಿದ್ದರಾಮೋತ್ಸವ ಸಮಿತಿಯಲ್ಲಿ ಗೌರವಾಧ್ಯಕ್ಷರು ಸೇರಿ 62 ಸದಸ್ಯರಿದ್ದಾರೆ ಇದೇನು ಕರ್ನಾಟಕದ #G23 ನಾಯಕರ ಪಟ್ಟಿಯೇ? ಕೆಪಿಸಿಸಿ ಅಧ್ಯಕ್ಷರನ್ನು ನೇರಾನೇರ ಬೆದರಿಸಲು ಗುಂಪು ಕಟ್ಟಿಕೊಂಡಂತಿದೆ! ಇದೇನು ಸಿದ್ದರಾಮೋತ್ಸವ ಸಮಿತಿಯೋ ಅಥವಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯೋ? ಬಹುಶಃ ಇದು ಬಂಡಾಯ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಾಗಿರುವ ಸಾಧ್ಯತೆ ಇದೆ ಎಂದು ಕಾಲೆಳೆದಿದೆ.

Live Tv

Leave a Reply

Your email address will not be published.

Back to top button