ಬೆಂಗಳೂರು: ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಅವರಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಸು ಮೂಡಿಸುವ ವಿಫಲ ಯತ್ನ ಮಾಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ವಾಗ್ದಾಳಿ ನಡೆಸಿದೆ.
ಟ್ವೀಟ್‍ನಲ್ಲಿ ಏನಿದೆ?
ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ ಕುಮಾರಸ್ವಾಮಿ ಅವರಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಸು ಮೂಡಿಸುವ ವಿಫಲ ಯತ್ನ ಮಾಡಿದ್ದಾರೆ. ನಂದಿನಿಯನ್ನು (Nandini) ಅಮುಲ್ (Amul) ಜೊತೆ ವಿಲೀನ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು? ಇದನ್ನೂ ಓದಿ: ಸಾಲದ ಹಣಕ್ಕಾಗಿ ಚಿತ್ರಹಿಂಸೆ, ಕಿಡ್ನಾಪ್, ಕೊಲೆ – 9 ತಿಂಗಳ ಬಳಿಕ ಚಾರ್ಮಾಡಿಯಲ್ಲಿ ಯುವಕನ ಶವಕ್ಕಾಗಿ ಶೋಧ
ಹಳೆ ಮೈಸೂರು ಭಾಗಕ್ಕೆ ನೀವು ಮಾಡಿದ ಅನ್ಯಾಯದ ಬಗ್ಗೆ ಹೇಳಿದ ಕೂಡಲೇ ಇಷ್ಟೊಂದು ಹೆದರಿಬಿಟ್ಟರೆ ಹೇಗೆ ಕುಮಾರಸ್ವಾಮಿಯವರೆ? ಆ ಭಾಗದಲ್ಲಿ ಜನ ಏನು ಹೇಳುತ್ತಿದ್ದಾರೋ ಅದನ್ನೇ ನಾವೂ ಹೇಳುತ್ತಿದ್ದೇವಷ್ಟೆ. ಜೊತೆಗೆ ರಾಜ್ಯದ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಕನ್ನಡಿಗರೇ ಎಂಬುದು ತಮಗೆ ತಿಳಿದಿರಲಿ. ಕರ್ನಾಟಕದ ಮೇಲೆ ಅಸೂಯೆ, ಅಸಹನೆ ನಮಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆತಂಕ ನಮಗೆ ಅರ್ಥವಾಗುತ್ತದೆ. ಜನರಲ್ಲಿ ತಪ್ಪು ಕಲ್ಪನೆ ಸೃಷ್ಟಿಸಲು ಸೂತ್ರಗಳನ್ನು ತರಾತುರಿಯಲ್ಲಿ ಹೆಣೆಯುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯವಾಗುವುದೆಂಬ ಭಯವೇ? ಇದನ್ನೂ ಓದಿ: ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರ್ತಾರೆ: ಶ್ರೀರಾಮುಲು
ತಂದಿಟ್ಟು ತಮಾಷೆ ನೋಡುವ ಕಲೆ, ನಮ್ಮ @hd_kumaraswamy ಅವರಿಗೆ ಸಿದ್ಧಿಸಿದೆ. ನಂದಿನಿ ಬ್ರ್ಯಾಂಡ್ ವಿಷಯ ಮುಂದಿಟ್ಟುಕೊಂಡು ಕರ್ನಾಟಕ ಮತ್ತು ಗುಜರಾತ್ ಮಧ್ಯೆ ವೈಮನಸ್ಯ ಮೂಡಿಸುವ ವಿಫಲ ಯತ್ನ ಮಾಡಿದ್ದಾರೆ. ನಂದಿನಿಯನ್ನು ಅಮುಲ್ ಜತೆ ವಿಲೀನ ಮಾಡಲಾಗುತ್ತದೆ ಎಂಬ ಸುಳ್ಳು ಸುದ್ದಿ ಕೊಟ್ಟಿದ್ಯಾರು?
1/4
— BJP Karnataka (@BJP4Karnataka) January 4, 2023
ಅಪ್ಪಟ ಕನ್ನಡಿಗ, ಮಾಜಿ ಪ್ರಧಾನಿ ದೇವೇಗೌಡರಿಗೆ (H.D Devegowda) ಹೇಗೆ ಗೌರವಿಸಬೇಕು ಎಂಬುದನ್ನು ಹೆಚ್.ಡಿ ಕುಮಾರಸ್ವಾಮಿ ಬಿಜೆಪಿಯನ್ನು ನೋಡಿ ಕಲಿಯಬೇಕು. ನಿಮ್ಮ ರಾಜಕೀಯದ ಆಸೆಗಾಗಿ ಕೆಲ ಕಾಲ ತಂದೆಯನ್ನೇ ದೂರವಿಟ್ಟ ಅವಕಾಶವಾದಿಯಲ್ಲವೇ ನೀವು? ಕನ್ನಡಿಗರನ್ನು ನೀವು ನಡೆಸಿಕೊಂಡಿದ್ದಕ್ಕಿಂತಲೂ ಗೌರವಯುತವಾಗಿ ಬಿಜೆಪಿ ನಡೆಸಿಕೊಳ್ಳುತ್ತಿದೆ ಎಂಬುದು ನೆನಪಿರಲಿ ಎಂದು ಟ್ವೀಟ್ ಮೂಲಕ ಬಿಜೆಪಿ ಕಿಡಿಕಾರಿದೆ.