Bengaluru CityKarnatakaLatestLeading NewsMain Post

ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್‌ ತುರ್ತು ಪರಿಸ್ಥಿತಿ ಹೇರಿತ್ತು – ಬಿಜೆಪಿ ತಿರುಗೇಟು

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬಿಜೆಪಿ ಅಕ್ರಮವೆಸಗಿದೆ ಎಂಬ ಕಾಂಗ್ರೆಸ್‌ (Congress) ಆರೋಪಕ್ಕೆ ರಾಜ್ಯ ಬಿಜೆಪಿ (BJP) ತಿರುಗೇಟು ನೀಡಿದೆ. ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ ಎಂದು ಬಿಜೆಪಿ ಟಾಂಗ್‌ ಕೊಟ್ಟಿದೆ.

ಟ್ವೀಟ್‌ನಲ್ಲೇನಿದೆ?
ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ. ಕಾಂಗ್ರೆಸ್ ಮತ್ತು ಕಂಪನಿಯದ್ದು ದಿನಕ್ಕೊಂದು ನಾಟಕ ಎಂದು ಜನತೆಗೆ ಚೆನ್ನಾಗಿ ಅರಿವಾಗಿದೆ. ನೀವು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯೂ ಆಗುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೂ ಇಲ್ಲ. ಇದನ್ನೂ ಓದಿ: ಮತದಾರರ ಪಟ್ಟಿ ದುರ್ಬಳಕೆ ಹಿಂದೆ ಕಾಂಗ್ರೆಸ್ ಮಾಡಿದ್ದನ್ನೇ ಈಗ ಬಿಜೆಪಿ ಮಾಡುತ್ತಿದೆ: ಹೆಚ್‍ಡಿಕೆ

ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸುವ ಏಕಮಾತ್ರ ಕಾರಣಕ್ಕಾಗಿ ಬ್ಯಾಲೇಟ್ ಪೇಪರ್ ಬಣ್ಣ ಬದಲಿಸಿ, ಜನರ ಹಾದಿ ತಪ್ಪಿಸಿ ವಾಮಮಾರ್ಗದಲ್ಲಿ ಕಾಂಗ್ರೆಸ್ ಸೋಲಿಸಿತ್ತು. ಮಾನ್ಯ ಸಿದ್ದರಾಮಯ್ಯನವರೇ, ಈ ಚುನಾವಣಾ ಅಕ್ರಮದ ಬಗ್ಗೆ ತಿಳಿದಿದೆಯೇ?

ಚುನಾವಣಾ ಅಕ್ರಮವೆಸಗಿ ಆರು ವರ್ಷ ಅಲಹಾಬಾದ್ ಹೈಕೋರ್ಟ್‌ನಿಂದ ಇಂದಿರಾ ಗಾಂಧಿ (Indira Gandhi) ಶಿಕ್ಷೆಗೆ ಒಳಪಟ್ಟಿದ್ದರು. ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಮಾನ್ಯ ಸಿದ್ದರಾಮಯ್ಯ ಅವರೇ, ಈ ಚುನಾವಣಾ ಅಕ್ರಮಗಳನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ CM ಸೇರಿ ಬಿಜೆಪಿಯ ಹಿರಿಯ ಸಚಿವರೆಲ್ಲರೂ ಭಾಗಿಯಾಗಿದ್ದಾರೆ: ಸಿದ್ದರಾಮಯ್ಯ

Live Tv

Leave a Reply

Your email address will not be published. Required fields are marked *

Back to top button