ಬೆಂಗಳೂರು: ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಹಾಗೂ ತಿರುಚಿದ ಸತ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.
Advertisement
#ಟಿಪ್ಪುಸುಳ್ಳುಇತಿಹಾಸ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು? ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ
Advertisement
ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ರ್ಪೇಕ್ಷೆ ಹಾಗೂ ತಿರುಚಿದ ಸತ್ಯ. ಶಾಲಾ- ಪಠ್ಯ ಕ್ರಮದಲ್ಲಿ ಇಂಥ ಸುಳ್ಳುಗಳೇಕೆ ಇರಬೇಕು?
ವಿದ್ಯಾರ್ಥಿಗಳಿಗೆ ಮತಾಂಧರ ತಿರುಚಿದ ಇತಿಹಾಸ ಕಲಿಸುವುದು ಎಷ್ಟು ಸರಿ?#ಟಿಪ್ಪುಸುಳ್ಳುಇತಿಹಾಸ
— BJP Karnataka (@BJP4Karnataka) March 30, 2022
Advertisement
ಬಿಜೆಪಿ ಟ್ವೀಟ್‌ನಲ್ಲೇನಿದೆ?
ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ʼರಾಜಸತ್ತೆʼಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?
Advertisement
ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ "ರಾಜಸತ್ತೆ"ಯ ಸೃಷ್ಟಿಕರ್ತರು.
ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು.
ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?#ಟಿಪ್ಪುಸುಳ್ಳುಇತಿಹಾಸ
— BJP Karnataka (@BJP4Karnataka) March 30, 2022
ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ ಮತಾಂಧನಿಗೆ ʼಮೈಸೂರು ಹುಲಿʼ ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ?
ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ?
ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ.
ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ ಮತಾಂಧನಿಗೆ "ಮೈಸೂರು ಹುಲಿ" ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ.
ನೈಜತೆ ಬಯಲಾಗಲೇಬೇಕಲ್ಲವೇ?#ಟಿಪ್ಪುಸುಳ್ಳುಇತಿಹಾಸ
— BJP Karnataka (@BJP4Karnataka) March 30, 2022
ಟಿಪ್ಪು ಇತಿಹಾಸ ಎಂದರೆ ಅದು ತಾಲಿಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ ಮಾಡುವ ಅಪಮಾನ.
ಟಿಪ್ಪು ಇತಿಹಾಸ ಎಂದರೆ ಅದು ತಾಲೀಬಾನ್, ಐಸಿಸ್ ಮತಾಂಧರಷ್ಟೇ ಘೋರ.
ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ.
ಸತ್ಯವನ್ನು ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ ಮಾಡುವ ಅಪಮಾನ.#ಟಿಪ್ಪುಸುಳ್ಳುಇತಿಹಾಸ
— BJP Karnataka (@BJP4Karnataka) March 30, 2022
ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು. ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು. ಈಗ ಅದೇ ಭಜಕರ ಗುಂಪು ಟಿಪ್ಪು ಸುಳ್ಳು ಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ
ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ @siddaramaiah ತಮ್ಮ ಅವಧಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ನೀಡಿದರು.
ಟಿಪ್ಪು ನಡೆಸಿದ ಹತ್ಯಾಕಾಂಡಕ್ಕೆ #ಟಿಪ್ಪುರಾಮಯ್ಯ ಒಪ್ಪಿಗೆಯ ಮುದ್ರೆ ನೀಡಿದ್ದರು.
ಈಗ ಅದೇ ಭಜಕರ ಗುಂಪು #ಟಿಪ್ಪುಸುಳ್ಳುಇತಿಹಾಸ ಬಯಲಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ.
— BJP Karnataka (@BJP4Karnataka) March 30, 2022
ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು. ಇತಿಹಾಸ ಎಂದರೆ ‘ಹೀಗೆ ಇತ್ತು’ ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು. ಆದರೆ ಈಗ ನಾವು ಓದುತ್ತಿರುವ ಇತಿಹಾಸ, ‘ಕಾಂಗ್ರೆಸ್ ಕೈಪಿಡಿ’ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು.
ಇತಿಹಾಸ ಎಂದರೆ "ಹೀಗೆ ಇತ್ತು" ಎಂಬ ರೀತಿಯ ವಾಸ್ತವ ಸತ್ಯದಲ್ಲಿರಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು.
ಆದರೆ ಈಗ ನಾವು ಓದುತ್ತಿರುವ ಇತಿಹಾಸ, "ಕಾಂಗ್ರೆಸ್ ಕೈಪಿಡಿ"!
— BJP Karnataka (@BJP4Karnataka) March 30, 2022