– ಹೈಕಮಾಂಡ್‌ಗೆ ಚುನಾವಣೋತ್ತರ ಸಮೀಕ್ಷೆ ವರದಿ ಕಳಿಸಿದ ರಾಜ್ಯ ಬಿಜೆಪಿ ಟೀಂ
– ಹೆಚ್ಚು, ಕಡಿಮೆ ಅಂತರದ ಗೆಲುವು ಎಲ್ಲಿ?
– ಬೆಂಗಳೂರು ಗ್ರಾಮಾಂತರದಲ್ಲಿ 50:50 ಫೈಟ್ ಇದೆ ಎಂದ ಬಿಜೆಪಿ
ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Elecitons 2024) ಕೊನೆ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ದೇಶದಲ್ಲಿ ಮತ್ತೆ ಮೋದಿ (Narendra Modi) ಸರ್ಕಾರ ಎಂದು ಭವಿಷ್ಯ ನುಡಿದಿವೆ. ಇದೇ ಹೊತ್ತಿನಲ್ಲಿ ಕರ್ನಾಟಕದಲ್ಲಿ (Karnataka) ಬಿಜೆಪಿ (BJP) ಲಾಭ-ನಷ್ಟವೇನು ಎಂಬ ಲೆಕ್ಕಾಚಾರದ ಸಮೀಕ್ಷೆ ವರದಿಯನ್ನು ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ತಂಡ ಕಳುಹಿಸಿದೆ.
Advertisement
ಕರ್ನಾಟಕ ಲೋಕಸಮರದಲ್ಲಿ ಬಿಜೆಪಿಗೆಷ್ಟು? ಜೆಡಿಎಸ್‌ಗೆಷ್ಟು ಸೀಟು ಎಂಬ ಲೆಕ್ಕಾಚಾರದ ಚುನಾವಣೋತ್ತರ ವರದಿಯನ್ನು ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ ತಂಡ ರವಾನಿಸಿದೆ. ಇದನ್ನೂ ಓದಿ: Exit Polls – 5 ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್!
Advertisement
Advertisement
ಕರ್ನಾಟಕದಲ್ಲಿ ಎನ್‌ಡಿಎ 20-22 ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. 4 ಕಡೆ ಬಿಜೆಪಿ ಗೆಲುವು ಅನುಮಾನ, 3 ಕಡೆ 50:50 ಫೈಟ್, ಮೋದಿ ಗ್ಯಾರಂಟಿ ಇಂಪ್ಯಾಕ್ಟ್ ಮಾಡಲಿದೆ ಎಂಬ ವಿಶ್ವಾಸ ಹಾಗೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಮೈತ್ರಿ ಲಾಭ ಆಗುತ್ತೆಂಬ ಲೆಕ್ಕಾಚಾರದ ವರದಿಯನ್ನು ಕಳುಹಿಸಿದೆ.
Advertisement
ಕರ್ನಾಟಕದಲ್ಲಿ ಬಿಜೆಪಿ ಲೆಕ್ಕಚಾರ ಏನು?
ಮೈತ್ರಿ 20 ರಿಂದ 22 ಸ್ಥಾನ ಗೆದ್ದೇ ಗೆಲ್ತೀವಿ. 9 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೆಚ್ಚು ಅಂತರದ ಗೆಲುವು ಸಾಧ್ಯತೆ ಇದೆ. 8 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಡಿಮೆ ಅಂತರದ ಗೆಲುವು ಆಗಬಹುದು. 4 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 50:50 ಫೈಟ್ ಇದೆ. 4 ರಿಂದ 5 ಕ್ಷೇತ್ರಗಳಲ್ಲಿ ಸೋಲು ಆಗುವ ಸಾಧ್ಯತೆ ಇದೆ. ಮೈತ್ರಿಯಿಂದ ಹಳೇ ಮೈಸೂರು ಭಾಗದ 10 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ ಎಂದು ಬಿಜೆಪಿ ಭರವಸೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಬ್ಕಿ ಬಾರ್ ಚಾರ್ ಸೌ ಪಾರ್ – ಎನ್‌ಡಿಎ 400ರ ಗಡಿ ದಾಟುತ್ತೆ ಎಂದ ಟುಡೇಸ್ ಚಾಣಕ್ಯ
ಹೆಚ್ಚು ಅಂತರದ ಗೆಲುವು- ಬಿಜೆಪಿ ಲೆಕ್ಕ!
ಮೈಸೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಉಡುಪಿ-ಚಿಕ್ಕಮಗಳೂರು.
ಕಡಿಮೆ ಅಂತರದ ಗೆಲುವು- ಬಿಜೆಪಿ ಲೆಕ್ಕ!
ಬೆಂಗಳೂರು ಸೆಂಟ್ರಲ್, ಚಿಕ್ಕಬಳ್ಳಾಪುರ, ತುಮಕೂರು, ಬೆಳಗಾವಿ, ಕಲಬುರಗಿ, ಬಳ್ಳಾರಿ, ಹಾವೇರಿ.
50:50: ಕ್ಷೇತ್ರಗಳು- ಬಿಜೆಪಿ ಲೆಕ್ಕಚಾರ
ಬೆಂಗಳೂರು ಗ್ರಾಮಾಂತರ, ಬೀದರ್, ಚಿಕ್ಕೋಡಿ, ದಾವಣಗೆರೆ, ರಾಯಚೂರು.
ಸೋಲಿನ ಎಡ್ಜ್ ಕ್ಷೇತ್ರಗಳು- ಬಿಜೆಪಿ ಲೆಕ್ಕಚಾರ
ಚಾಮರಾಜನಗರ, ಕೊಪ್ಪಳ, ರಾಯಚೂರು, ಚಿತ್ರದುರ್ಗ.