ರಾಮನಗರ: ಇಲ್ಲಿನ ಬಿಜೆಪಿ ಅಭ್ಯರ್ಥಿ ಕೈಕೊಟ್ಟು ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಇಸದಂತೆ ಇದೀಗ ರಾಮನಗರ ಉಪಚುನಾವಣೆ ಮುಂದೂಡುವಂತೆ ಬಿಜೆಪಿ ಮನವಿ ಮಾಡಿಕೊಂಡಿದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ತುರ್ತು ದೂರು ಸಲ್ಲಿಕೆ ಮಾಡಿದೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಗುರುವಾರ ತಡರಾತ್ರಿ ಇ-ಮೇಲ್ ಮೂಲಕ ದೂರು, ಇಂದು ನಿಯೋಗದೊಂದಿಗೆ ತೆರಳಿ ಬಿಜೆಪಿ ದೂರು ನೀಡಲಿದೆ ಎಂಬುದಾಗಿ ತಿಳಿದುಬಂದಿದೆ.
Advertisement
Advertisement
ತಾಂತ್ರಿಕ ದೋಷದಿಂದ ತೊಂದರೆಯಾಗಿದ್ದಲ್ಲಿ ಚುನಾವಣೆ ಮುಂದೂಡಬಹುದಿತ್ತು. ಆದ್ರೆ ಇದೀಗ ಅಭ್ಯರ್ಥಿಯ ಸಮಸ್ಯೆಯಾಗಿದ್ದರಿಂದ ಚುನಾವಣೆ ಮುಂದೂಡುವುದು ಕಷ್ಟ ಎಂದು ಹೇಳಲಾಗುತ್ತಿದೆ.
Advertisement
ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಎಲ್. ಚಂದ್ರಶೇಖರ್ ಚುನಾವಣೆ ಹಿಂದೆ ಸರಿದ ಬಳಿಕ ಮಾತನಾಡಿದ ಅವರು, ನಾನು ಪಕ್ಷದ ಅಭ್ಯರ್ಥಿಯಾಗಿದ್ದರೂ, ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ರಾಮನಗರದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಜನ ಹಿತಕ್ಕಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೆ. ಚುನಾವಣಾ ವೆಚ್ಚವನ್ನು ಪಕ್ಷವೇ ನೋಡಿಕೊಳ್ಳುತ್ತೇವೆ. ನೀವು ಅಭ್ಯರ್ಥಿಯಾಗಿ ಸಾಕು, ನಮ್ಮ ಎಲ್ಲ ನಾಯಕರು ನಿಮ್ಮ ಪರವಾಗಿ ಬಂದು ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ದರು. ನಾನು ಫೋನ್ ಮಾಡಿದ್ರೆ ಕಾಲ್ ರಿಸೀವ್ ಮಾಡಲ್ಲ ಅಂದ್ರೆ ನನ್ನನ್ನು ಎಷ್ಟು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುವುದು ಗೊತ್ತಾಯಿತು. ಹಾಗಾಗಿ ಪಕ್ಷದಿಂದ ಹೊರ ಬಂದು ಕಾಂಗ್ರೆಸ್ ಸೇರ್ಪಡೆ ಆಗಿದ್ದೇನೆ ಎಂದು ಹೇಳಿದ್ದರು.
Advertisement
ಸದ್ಯ ಚಂದ್ರಶೇಖರ್ ಕಣದಿಂದ ಹಿಂದೆ ಸರಿದ ಬಳಿಕ ಇದೀಗ ಬಿಜೆಪಿ ಪಾಳಯ ಹೊಸ ತಂತ್ರ ನಡೆಸ್ತಿದೆ. ಹೊಸ ಕರಪತ್ರಗಳನ್ನ ಸಿದ್ಧಪಡಿಸಿದ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಚುನಾವಣಾ ಕರಪತ್ರದಲ್ಲಿ ಅಭ್ಯರ್ಥಿ ಫೋಟೋ, ಹೆಸರು ನಾಪತ್ತೆಯಾಗಿದ್ದು, ಅಭ್ಯರ್ಥಿ ಫೋಟೋವಿದ್ದ ಜಾಗದಲ್ಲಿ ಪಕ್ಷದ ಚಿಹ್ನೆ ಕಮಲದ ಗುರುತು ಮತ್ತು ಅಭ್ಯರ್ಥಿ ಹೆಸರಿದ್ದ ಜಾಗದಲ್ಲಿ `ದೇಶ ಮೊದಲು’ ಎಂಬ ಬರಹವನ್ನು ಬರೆಯಲಾಗಿದೆ.
https://www.youtube.com/watch?v=SUz3348T4QA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv