ನವದೆಹಲಿ: ಉತ್ತರ ಪ್ರದೇಶದಲ್ಲಿ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಮರುಕಳಿಸಿದ್ದು ಬಿಜೆಪಿ ಜಯಭೇರಿ ಬಾರಿಸಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಆದರೆ ಅಷ್ಟೇ ಪ್ರಮಾಣದ ವೋಟ್ ಬಿಜೆಪಿಗೆ ಬಿದ್ದರೆ 300 ಕ್ಕಿಂತ ಹೆಚ್ಚಿನ ಸೀಟ್ ಬರಬಹುದು ಎನ್ನುವ ವಿಶ್ಲೇಷಣೆಯ ಸುದ್ದಿಯನ್ನು ಪಬ್ಲಿಕ್ ಟಿವಿ ಗುರುವಾರ ಪ್ರಕಟಿಸಿತ್ತು. ಈ ವಿಶ್ಲೇಷಣಾತ್ಮಕ ಸುದ್ದಿ ನಿಜವಾಗುತ್ತಿದ್ದು, 300ಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಸಮೀಪ ಬಂದಿದೆ.
Advertisement
ಎಷ್ಟು ಸ್ಥಾನಗಳಿಸಬೇಕು? 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳನ್ನು ಗಳಿಸಬೇಕು.
Advertisement
ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.
Advertisement
ಇದನ್ನೂ ಓದಿ: ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?