ಬೆಂಗಳೂರು: ರಾಜ್ಯ ವಿಧಾಸನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಬಿಜೆಪಿ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ, ವರುಣಾ, ವಿರಾಜಪೇಟೆ ಹಾಗೂ ಚಾಮರಾಜಪೇಟೆಗೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷರ್ದನ್, ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಕುಟುಂಬ, 8 ಮಾಜಿ ಸಚಿವರಿಗೆ ಎರಡನೇ ಲಿಸ್ಟ್‍ನಲ್ಲಿ ಟಿಕೆಟ್ ಕೊಡಲಾಗಿದೆ. ಅಲ್ಲದೆ ಕಳಂಕಿತ ಆರೋಪದಡಿ ಕಳೆದ ಬಾರಿ ಟಿಕೆಟ್ ನಿರಾಕರಿಸಿದ್ದ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿಗೂ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕರುಣಿಸಲಾಗಿದೆ. ಕೊನೆ ಕ್ಷಣದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ನೀಡಲಾಗಿದೆ. ಮತ್ತೊಂದು ಅಚ್ಚರಿ ಎಂಬಂತೆ ಸಾಗರದಲ್ಲಿ ಬೇಳೂರು ಬದಲಿಗೆ ಹರತಾಳು ಹಾಲಪ್ಪ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
Advertisement
Advertisement
2ನೇ ಲಿಸ್ಟ್ ನಲ್ಲಿ ಇರುವ ಪ್ರಮುಖರ ಹೆಸರು:
Advertisement
* ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
* ಬಳ್ಳಾರಿ ಗ್ರಾ. – ಫಕೀರಪ್ಪ
* ಶಿವಾಜಿನಗರ – ಕಟ್ಟಾ ಸುಬ್ರಮಣ್ಯ ನಾಯ್ಡು
* ಮಾಲೂರು – ಕೃಷ್ಣಯ್ಯ ಶೆಟ್ಟಿ
* ಮಳವಳ್ಳಿ – ಬಿ. ಸೋಮಶೇಖರ್
* ಸೊರಬ – ಕುಮಾರ ಬಂಗಾರಪ್ಪ
* ಸಾಗರ – ಹರತಾಳು ಹಾಲಪ್ಪ
* ಬೀದರ್ – ಸೂರ್ಯಕಾಂತ ನಾಗಮಾರಪಳ್ಳಿ
* ಹೊನ್ನಾಳ್ಳಿ – ರೇಣುಕಾಚಾರ್ಯ
* ಬೀಳಗಿ – ಮುರುಗೇಶ್ ನಿರಾಣಿ
Advertisement
ಯಾವ ಪ್ರಮುಖರಿಗೆ ಟಿಕೆಟ್ ಇಲ್ಲ:
ಕ್ಷೇತ್ರ ಯಾರಿಗೆ ಇಲ್ಲ ..! ಯಾರಿಗೆ ಸಿಕ್ತು..?
* ತುಮಕೂರು ನಗರ – ಸೊಗಡು ಶಿವಣ್ಣ – ಜ್ಯೋತಿ ಗಣೇಶ್
* ಬ್ಯಾಡಗಿ – ಸುರೇಶ್‍ಗೌಡ ಪಾಟೀಲ್ /ಶಿವರಾಜ್ ಸಜ್ಜನ್ – ವಿರೂಪಕ್ಷಪ್ಪ ಬಳ್ಳಾರಿ
* ಸಾಗರ – ಬೇಳೂರು ಗೋಪಾಲ ಕೃಷ್ಣ – ಹರತಾಳು ಹಾಲಪ್ಪ
* ಕಲಬರುಗಿ ಉತ್ತರ – ಶಶಿಲ್ ನಮೋಶಿ – ಚಂದ್ರಕಾಂತ್ ಬಿ. ಪಾಟೀಲ್
* ದೇವರ ಹಿಪ್ಪರಗಿ – ಮಹದೇವಿ ನಡಹಳ್ಳಿ – ಸೋಮನ್‍ಗೌಡ ಪಾಟೀಲ್
* ಗದಗ – ಶ್ರೀಶೈಲಪ್ಪ ಬಿದರೂರು – ಅನಿಲ್ ಮೆಣಸಿನಕಾಯಿ
* ಇಂಡಿ – ರವಿಕಾಂತ್ ಪಾಟೀಲ್ – ದಯಾಸಾಗರ್
* ನವಲಗುಂದ – ಮೋಹನ್ ಲಿಂಬಿಕಾಯಿ – ಶಂಕರ್ ಮುನೇನಕೊಪ್ಪ ಪಾಟೀಲ್
2ನೇ ಪಟ್ಟಿಯಲ್ಲಿನ ಹೊಸಮುಖಗಳು:
* ನಂಜನಗೂಡು – ಹರ್ಷವರ್ಧನ್ (ಮಾಜಿ ಶಾಸಕ ಶ್ರೀನಿವಾಸ್ ಪ್ರಸಾದ್ ಅಳಿಯ)
* ವಿಜಯನಗರ – ರವೀಂದ್ರ (ಬಿಬಿಎಂಪಿ ಮಾಜಿ ಕಾರ್ಪೊರೇಟರ್)
* ಗದಗ – ಅನಿಲ್ ಮೆಣಸಿನಕಾಯಿ
* ಚಳ್ಳಕೆರೆ – ಕೆ.ಟಿ ಕುಮಾರಸ್ವಾಮಿ (ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ)
* ಕಲಘಟಗಿ – ಮಹೇಶ್ ತೆಂಗಿನಕಾಯಿ (ಉದ್ಯಮಿ)
ಪಕ್ಷಾಂತರಿಗಳಿಗೂ ಬಿಜೆಪಿ ಟಿಕೆಟ್ :
* ಸೊರಬ – ಕುಮಾರ ಬಂಗಾರಪ್ಪ
* ಮಹಾಲಕ್ಷ್ಮೀ ಲೇಔಟ್ – ನೆ.ಲ. ನರೇಂದ್ರ ಬಾಬು
* ನರಸಿಂಹರಾಜ – ಸಂದೇಶ್ ಸ್ವಾಮಿ
2ನೇ ಪಟ್ಟಿಯಲ್ಲಿನ ವಿಶೇಷತೆಯಾಗಿ ಬಿಜೆಪಿ ಗಂಡ ಹೆಂಡತಿ ಇಬ್ಬರಿಗೂ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಪತ್ನಿ ಶಶಿಕಲಾ ಜೊಲ್ಲೆ ಟಿಕೆಟ್ ಪಡೆದರೆ, 2ನೇ ಪಟ್ಟಿಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಟಿಕೆಟ್ ಪಡೆದಿದ್ದಾರೆ.
ಬಿಜೆಪಿಯ ಮೊದಲ ಮತ್ತು ಎರಡನೇ ಪಟ್ಟಿ ಸೇರಿ ಒಟ್ಟು 152 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ.
ಯಾವ ಜಾತಿಯವರಿಗೆ ಎಷ್ಟು ಟಿಕೆಟ್?
* ಲಿಂಗಾಯತ – 53
* ಒಕ್ಕಲಿಗ – 27
* ಎಸ್‍ಸಿ – 21
* ಎಸ್‍ಟಿ – 13
* ಒಬಿಸಿ – 21
* ಬ್ರಾಹ್ಮಣ – 11
* ರೆಡ್ಡಿ – 04
* ಜೈನ – 01
* ಕೊಡವ – 01