– ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸೋಮಣ್ಣಗೆ ನಿರಾಸೆ
– ರಾಜ್ಯದ ಒಂದು ಸ್ಥಾನಕ್ಕೆ ಮಾತ್ರ ಹೈಕಮಾಂಡ್ ಟಿಕೆಟ್
ನವದೆಹಲಿ: ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡಿದೆ. ರಾಜ್ಯದ ಒಬ್ಬರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ.
Advertisement
ರಾಜ್ಯದ ಒಂದು ಸ್ಥಾನಕ್ಕೆ ನಾರಾಯಣ ಕೃಷ್ಣನಾಸ ಭಾಂಡಗೆ ಟಿಕೆಟ್ ನೀಡಿದೆ. ಮಾಜಿ ಎಂಎಲ್‌ಸಿ ಹಾಗೂ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಭಾಂಡಗೆ ಅವರು ಆರ್‌ಎಸ್‌ಎಸ್ ಹಿನ್ನಲೆಯ ನಾಯಕ. ಬಾಗಲಕೋಟೆ ಯ ನಾಯಕರು, ಆರೆಸೆಸ್ ಹಿನ್ನೆಲೆಯ ನಾಯಕ
Advertisement
ಒಟ್ಟು 14 ಮಂದಿಯ ಹೆಸರನ್ನು ಬಿಜೆಪಿ ಘೋಷಣೆ ಮಾಡಿದೆ. ಬಿಹಾರಕ್ಕೆ 2, ಛತ್ತೀಸಗಢ, ಹರಿಯಾಣ, ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರಾಖಂಡಕ್ಕೆ ತಲಾ 1 ಟಿಕೆಟ್ ನೀಡಿದೆ. ಉತ್ತರ ಪ್ರದೇಶದ 7 ಮಂದಿಯ ಹೆಸರು ಘೋಷಣೆಯಾಗಿದೆ. ಆ ಮೂಲಕ ಹೈಕಮಾಂಡ್ ರಾಜ್ಯ ಬಿಜೆಪಿಗೆ ರಾಜ್ಯಸಭೆ ಚುನಾವಣೆ ಶಾಕ್ ಕೊಟ್ಟಿದೆ. ಬಿಜೆಪಿ ಗೆಲ್ಲಲು ಅವಕಾಶ ಇರುವ ಒಂದು ಸ್ಥಾನಕ್ಕೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
Advertisement
ರಾಜ್ಯಸಭೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸೋಮಣ್ಣಗೆ ನಿರಾಸೆ
ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಲಾಭಿ ಮಾಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ನಿರಾಸೆಯಾಗಿದೆ. ಹಾಲಿ ರಾಜ್ಯಸಭೆ ಸದಸ್ಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಂದುವರಿಸದಿರಲು ಹೈಕಮಾಂಡ್ ನಿರ್ಧರಿಸಿದೆ. ರಾಜ್ಯದಿಂದ ಕಳಿಸಿದ್ದ ಸಂಭಾವ್ಯರ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಮನ್ನಣೆ ಕೊಟ್ಟಿಲ್ಲ. ಪಕ್ಷ ನಿಷ್ಠರ ಬದಲು ಸಂಘನಿಷ್ಠ ವ್ಯಕ್ತಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
Advertisement
ಫೆ.27 ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಫೆ.15 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬಿಜೆಪಿಯಿಂದ ಸದ್ಯಕ್ಕೆ ಒಂದೇ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ.