ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat Elections) ಆಡಳಿತಾರೂಢ ಬಿಜೆಪಿ (BJP) ಸತತ 7ನೇ ಬಾರಿಗೆ ಜಯಭೇರಿ ಸಾಧಿಸಿದೆ. 156 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ದಾಖಲೆ ನಿರ್ಮಿಸಿದೆ.
ಕೇಂದ್ರ ಚುನಾವಣಾ ಆಯೋಗ ಗುಜರಾತ್ ಚುನಾವಣಾ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 156, ಕಾಂಗ್ರೆಸ್ 17, (Congress) ಆಪ್ 5 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಆಪ್ ಖಾತೆ ತೆರೆದಿದ್ದು, ರಾಷ್ಟ್ರೀಯ ಪಕ್ಷವಾಗಿಯೂ ಹೊರಹೊಮ್ಮಿದೆ.
Advertisement
BJP registers a landslide victory in Gujarat by winning 156 of the 182 seats, as per Election Commission.#GujaratElectionResult pic.twitter.com/ecJOVviIkB
— ANI (@ANI) December 8, 2022
Advertisement
ಮೇಲ್ನೋಟಕ್ಕೆ ತ್ರಿಕೋನ ಪೈಪೋಟಿಯಂತೆ ಗುಜರಾತ್ ಚುನಾವಣಾ ಕಂಡರೂ, ಸುಂಟರಗಾಳಿ ರೀತಿಯಲ್ಲಿ ವಿಜಯಪತಾಕೆ ಹಾರಿಸಿದ್ದು ಮಾತ್ರ ಬಿಜೆಪಿಯೇ. ಮೋದಿ ಪಡೆಯ ಸುನಾಮಿ ಮಾದರಿ ಹೊಡೆತದ ಧಾಟಿಗೆ ಕಾಂಗ್ರೆಸ್ ಹೆಚ್ಚು ಕಡಿಮೆ ನಾಮಾವಶೇಷವಾಗಿದೆ. ಪ್ರಚಾರ ವೇಳೆ ಹೆಚ್ಚು ಸೌಂಡ್ ಮಾಡಿದ ಎಎಪಿ ಕೂಡ ಸದ್ದಿಲ್ಲದೇ ಮಕಾಡೆ ಮಲಗಿದೆ. ಈ ಮೂಲಕ 27 ವರ್ಷಗಳ ಆಳ್ವಿಕೆ ನಂತರವೂ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಇದನ್ನೂ ಓದಿ: ದೇಶದ ಹಿತಕ್ಕಾಗಿ ಇನ್ನಷ್ಟು ಕಠಿಣ ನಿರ್ಣಯ : ಮೋದಿ
Advertisement
Advertisement
ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಾರಥ್ಯದಲ್ಲಿಯೇ ಡಿಸೆಂಬರ್ 12ರಂದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಭೂಪೇಂದ್ರ ಪಟೇಲ್ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದಾರೆ. ಅಂದ ಹಾಗೇ, ಶೇಕಡಾ 10ರಷ್ಟು ಸ್ಥಾನಗಳನ್ನು ಗೆಲ್ಲದ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನವನ್ನು ಕಳೆದುಕೊಂಡಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ 7ನೇ ಬಾರಿಗೆ ಬಿಜೆಪಿಗೆ ಅಧಿಕಾರ – ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡ ಕಾಂಗ್ರೆಸ್