ಬೆಂಗಳೂರು: ರಾಜ್ಯದ ವಿವಿಧೆಡೆ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ, ಉಪಚುನಾವಣೆಯ (Municipal Polls) ಫಲಿತಾಂಶ (Result) ಹೊರಬಿದ್ದಿದೆ.
Advertisement
ನಾಲ್ಕು ವರ್ಷಗಳ ಬಳಿಕ ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ಸರಳ ಬಹುಮತಕ್ಕೆ ಕೇವಲ 1 ಸ್ಥಾನದ ಕೊರತೆ ಎದುರಿಸ್ತಿರೋ ಬಿಜೆಪಿ (BJP) ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿಯೋದು ಖಚಿತವಾಗಿದೆ. 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ (Congress) 10, ಜೆಡಿಎಸ್ (JDS) ಒಂದು ಸ್ಥಾನ ಗಳಿಸಿದೆ. ಇದೆ ಮೊದಲ ಬಾರಿಗೆ ಎಂಐಎಂ (MIM) 2 ಸ್ಥಾನ ಗಳಿಸಿದೆ. ಇದನ್ನೂ ಓದಿ: ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು
Advertisement
Advertisement
ಕೊಳ್ಳೆಗಾಲ ನಗರಸಭೆಯ ಏಳು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಶಾಸಕ ಎನ್. ಮಹೇಶ್ ಪ್ರತಿಷ್ಠೆ ಉಳಿಸಿಕೊಂಡಿದ್ದಾರೆ. ಏಳು ಮಂದಿ ಪೈಕಿ ಆರು ಮಂದಿಯನ್ನು ಕಮಲ ಪಕ್ಷದಡಿ ಗೆಲ್ಲಿಸಿಕೊಳ್ಳಲು ಸಫಲರಾಗಿದ್ದಾರೆ. ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಇದನ್ನು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಎನ್.ಮಹೇಶ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಮಹೇಶ್ ಕಮಾಲ್, ಬಿಜೆಪಿಗೆ ಭರ್ಜರಿ ಗೆಲುವು – 7 ಅನರ್ಹರಲ್ಲಿ 6 ಮಂದಿ ಜಯಭೇರಿ
Advertisement
ನಾಗಮಂಗಲ ಪುರಸಭೆಯ 3ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದ್ದು, ಕೇವಲ ಐದು ಮತ ಪಡೆದು ಬಿಜೆಪಿ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದಾರೆ. ಮುಳಬಾಗಿಲು ನಗರಸಭೆಯ 2ನೇ ವಾರ್ಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಂಡಿದೆ. ಎಎಪಿ (AAP) ಎಲ್ಲಿಯೂ ಖಾತೆ ತೆರೆದಿಲ್ಲ.