ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ (Davanagere) ಕೇಂದ್ರದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ (GM Siddeshwar) ಜನ್ಮದಿನ ಸಂಭ್ರಮ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ರೆಬೆಲ್ ನಾಯಕರು ಮುಗಿಬಿದ್ದು ಕೆಂಡ ಕಾರಿದರು.
ಇಂದು ಬೆಣ್ಣೆನಗರಿ ಬಿಜೆಪಿಯಲ್ಲಿ ಅಕ್ಷರಶಃ ಇನ್‌ಸೈಡ್ ಸ್ಟೋರಿಗಳು ಓಪನ್ ಆದವು. ಸುಮಾರು ದಿನಗಳಿಂದ ಹೊಟ್ಟೆಯಲ್ಲಿ ಬಚ್ಚಿಟ್ಟ ಸಂಗತಿಗಳು ಹೊರಬಂದವು, ಕಾರ್ಯಕರ್ತರಿಗೆ ಕನಸಲ್ಲೂ ಕಂಡಿರದ ವಿಷಯಗಳ ಅನಾವರಣ ಆಗಿತ್ತು. ನಾಯಕರ ಮಧ್ಯ ಈ ರೀತಿ ಆಗಿದೆಯಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸಂದರ್ಭ ನಿರ್ಮಾಣ ಆಗಿತ್ತು. ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ಅವರ 74ನೇ ಜನ್ಮದಿನವನ್ನ ಅಭಿಮಾನಿ ಬಳಗದಿಂದ ನಗರದ ರೇಣುಕಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಇದು ಜನ್ಮದಿನ ಮಾತ್ರ ಎಂದು ನಾಯಕರು ಸಾರಿದ್ದರು. ಆದರೆ ಬರುಬರುತ್ತಾ ಆಗಿದ್ದೆ ಬೇರೆ. ಬಿಜೆಪಿ ರೆಬೆಲ್ಸ್ ನಾಯಕರ ಶಕ್ತಿ ಪ್ರದರ್ಶನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಅರವಿಂದ್ ಲಿಂಬಾವಳಿ, ಗೋವಿಂದ ಕಾರಜೋಳ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಬಿಪಿ ಹರೀಶ್ ಸೇರಿದಂತೆ ಹಲವು ನಾಯಕರ ಸಮಾಗಮವಾಯಿತು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ
ಈ ವೇಳೆ ಮಾತನಾಡಿದ ಅರವಿಂದ ಲಿಂಬಾವಳಿ (Aravind Limbavali), ಯಡಿಯೂರಪ್ಪ (BS Yediyurappa) ಪಕ್ಷ ಬಿಟ್ಟು ಹೋದವರು. ಕಾಂಗ್ರೆಸ್, ಜೆಡಿಎಸ್ ಕದ ತಟ್ಟಿ ಬಂದವರು. ಮತ್ಯಾಕೆ ವಾಪಾಸ್ ಬಂದರೋ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಆಗೋಕೆ ಸಿದ್ದೇಶ್ವರ್ ಕಾರಣ. ಆದರೆ ಸಿದ್ದೇಶ್ವರ್ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ನೇರವಾಗಿ ಟಾಂಗ್ ಕೊಟ್ಟು ಕಿಡಿಕಾರಿದರು. ಇದನ್ನೂ ಓದಿ: 50 ಮೌಲಾನ ಆಜಾದ್ ಮಾದರಿ ಶಾಲೆ ತೆರೆಯಲು ಸರ್ಕಾರ ಆದೇಶ – ವಿಪಕ್ಷಗಳ ಕಿಡಿ
ಕಾರ್ಯಕ್ರಮದ ಉದ್ದಕ್ಕೂ ದಾವಣಗೆರೆ ಎಂಪಿ ಸೋಲಿನ ಚರ್ಚೆ, ಬಿಎಸ್‌ವೈ ವಿಚಾರವೇ ಪ್ರಮುಖವಾಗಿತ್ತು. ರೇಣುಕಾಚಾರ್ಯ ಅಂಡ್ ಟೀಂ ಸೋಲಿಗೆ ಪ್ರಮುಖ ಕಾರಣ ಹಾಗೂ ಬಿಎಸ್ ವೈ, ವಿಜಯೇಂದ್ರ ಕಾರಣ ಎಂದು ನಾಯಕರು ಪರೋಕ್ಷವಾಗಿ ಆರೋಪಿಸಿದರು. ನಮ್ಮವರ ಅಡ್ಜಸ್ಟ್ಮೆಂಟ್ ಕಾರಣದಿಂದ ಕಾಂಗ್ರೆಸ್ ಗೆದ್ದಿದೆ. ಮೊಣಕಾಲುದ್ದ ನೀರಲ್ಲಿ ದೋಣಿ ಚಲಾಯಿಸಿ, ಕೊರೊನಾ ಟೈಂನಲ್ಲಿ ಡಿಂಗ್ ಡಾಂಗ್ ಮಾಡಿದ್ರು ಎಂದು ರೇಣುಕಾಚಾರ್ಯಗೆ ಪ್ರತಾಪ್ ಸಿಂಹ ಟಾಂಗ್ ಕೊಟ್ಟರು. ಇದನ್ನೂ ಓದಿ: 111.8 ಕೋಟಿ ಅನುದಾನದ ಬಳಿಕವೂ ಶಾಲಾ ಮಕ್ಕಳ ಶೂ-ಸಾಕ್ಸ್‌ಗಾಗಿ ದಾನಿಗಳ ಮೊರೆಹೋದ ಸರ್ಕಾರ
2006ರಲ್ಲಿ ಮೊದಲ ಭಾರೀ ಬಿಜೆಪಿ ಸರ್ಕಾರ ಬರಲು ನಾನೇ ಕಾರಣ. ಕುಮಾರಸ್ವಾಮಿ ಸಿಎಂ, ಬಿಎಸ್‌ವೈ ಸಿಎಂ ಆಗೋ ವಿಚಾರ ಮಾತುಕತೆ ಮಾಡಿದ್ದೇ ನಾನು. ನಂತರ 110 ಸೀಟು ಬಂದಾಗ ಉಳಿದ ಶಾಸಕರನ್ನ ಕರೆದುಕೊಂಡು ಬಂದು ಬಿಎಸ್‌ವೈ ಸಿಎಂ ಮಾಡಿದ್ದೇ ನಾವು. ಅವರಿಂದ ನಾನೇನು ಗಳಿಸಿಲ್ಲ, ಪಡೆದಿಲ್ಲ. ನನ್ನನ್ನು ಮಂತ್ರಿ ಮಾಡಿದ್ದಾರೆ ಎಂದಿದ್ದಾರೆ. ನನ್ನನ್ನು ಮಂತ್ರಿ ಮಾಡಿದ್ದು ಮೋದಿಜಿ, ಅನಂತಕುಮಾರ್. ಇವರಿಂದ ನಾನೇನು ಪಡೆದಿಲ್ಲ, ನನ್ನಿಂದ ಇವರಿಗೆ ಅನುಕೂಲ ಆಗಿದೆ. ಆದರೆ ನನ್ನ ಪತ್ನಿಯನ್ನು ಚುನಾವಣೆಯಿಂದ ಸೋಲಿಸಿದರು ಎಂದು ಸಿದ್ದೇಶ್ವರ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
ಒಟ್ಟಾರೆ ಬೆಣ್ಣೆನಗರಿಯಲ್ಲಿಂದು ರೆಬೆಲ್ಸ್ ಸೈಲೆಂಟಾಗಿ ಠಕ್ಕರ್ ಮೇಲೆ ಠಕ್ಕರ್ ಕೊಟ್ಟರು. ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ಪ್ರಸ್ತಾಪಿಸಿದರೆ ತೊಡಕಾಗಬಹುದೆಂದ ಅರಿತ ನಾಯಕರು ಚಾಣಾಕ್ಷತನದಿಂದ ಮಾತುಗಳನ್ನಾಡಿದರು. ವಿಜಯೇಂದ್ರನ ಬಿಟ್ಟು ಯಡಿಯೂರಪ್ಪ ವಿರುದ್ಧ ಸೈಲೆಂಟಾಗಿ ಸಮರ ಸಾರಿದಂತೆ ಕಾಣುತ್ತಿದೆ. ಇನ್ನೊಂದು ಕಡೆ ಬಿಎಸ್‌ವೈ, ರೇಣುಕಾಚಾರ್ಯ ವಿರುದ್ಧ ಮಾತನಾಡಬೇಕಾದದ್ದನ್ನೆಲ್ಲ ಮಾತಾಡಿಬಿಟ್ಟರು. 30 ವರ್ಷದಿಂದ ಭದ್ರಕೋಟೆಯಾಗಿದ್ದ ದಾವಣಗೆರೆಯನ್ನು ಲಗಾನ್ ಟೀಂನಿಂದ ಕಳೆದುಕೊಂಡಿದ್ದರ ಕುರಿತಾಗಿ ಎಲ್ಲರು ರೋಷಾವೇಶ ಹೊರ ಹಾಕಿದರು. ಇದನ್ನೂ ಓದಿ: 15 ಏಷ್ಯನ್ ರಾಷ್ಟ್ರಗಳ ಎದುರು ವಿಜಯಪುರದ ಇತಿಹಾಸ ಅನಾವರಣಗೊಳಿಸಿದ ಡಿಸಿ