MLC ಲಖನ್ ಜಾರಕಿಹೊಳಿಯನ್ನು ಭೇಟಿಯಾದ ಬಿಜೆಪಿ ರೆಬೆಲ್‌ ಟೀಂ

Public TV
1 Min Read
BJP Rebel Team meets MLC Lakhan Jarkiholi gokak Belagavi 1

ಬೆಳಗಾವಿ: ದೇವಿ ದರ್ಶನದ ಹೆಸರಿನಲ್ಲಿ ಪರಿಷತ್‌ ಸದಸ್ಯ ಲಖನ್ ಜಾರಕಿಹೊಳಿ‌ಯವರನ್ನು (Lakhan Jarkiholi) ಬಿಜೆಪಿ ರೆಬೆಲ್ ತಂಡ (BJP Rebel Team) ಭೇಟಿ ಮಾಡಿದೆ.

ಗೋಕಾಕ್‌ ಗ್ರಾಮ ದೇವಿ ಜಾತ್ರೆಗೆ ಆಗಮಿಸಿದ್ದ ರೆಬೆಲ್ ಟೀಂ ನಾಯಕರು ಲಖನ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದರು. ಸಹೋದರನ ಮನೆಗೆ ತಮ್ಮ ಸಹೋದ್ಯೋಗಿಗಳನ್ನು ಶಾಸಕ ರಮೇಶ್‌ (Ramesh Jarkiholi) ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ. ಇದನ್ನೂ ಓದಿ: ಅಂಜನಾದ್ರಿಯಲ್ಲಿ ಮತ್ತೆ ವಿವಾದ ಹೊರಗಿನ ಅರ್ಚಕರಿಂದ ಪೂಜೆ ಮಾಡಿಸಿದ ನೂತನ ಡಿಸಿ ಸುರೇಶ್

BJP Rebel Team meets MLC Lakhan Jarkiholi gokak Belagavi 2

ನೀವು ನಮ್ಮ ತಂಡಕ್ಕೆ ಬರುತ್ತೀರಿ ಎಂಬ ಕಾರಣಕ್ಕೆ ನಮ್ಮನ್ನ ಕರೆದುಕೊಂಡು ಬಂದಿದ್ದಾರೆ ಎಂದು ಲಿಂಬಾವಳಿ ಈ ವೇಳೆ ಚಟಾಕಿ ಹಾರಿಸಿದರು. ಇದಕ್ಕೆ ಲಖನ್ ಜಾರಕಿಹೊಳಿ‌, ನಿಮ್ಮ ತಂಡದಲ್ಲಿ ಇದ್ದೇವೆ. ನಾವು ಸುಮ್ಮನೇ ಹೊರಗಿದ್ದೇವೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

ಪರಿಷತ್‌ ಚುನಾವಣೆಯಲ್ಲಿ ಸ್ವತಂತ್ರವಾಗಿ ನಿಂತು ಲಖನ್‌ ಜಾರಕಿಹೊಳಿ ಗೆದ್ದ ಬಗ್ಗೆ ರಮೇಶ್‌ ಜಾರಕಿಜೊಳಿ ಕೊಂಡಾಡಿದ್ದಾರೆ. ಶ್ರೀಮಂತ ಪಾಟೀಲ್, ಮಹೇಶ ಕುಮಟಳ್ಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್ ರಾಜಕಾರಣದ ಕುರಿತು ಮಾತನಾಡಿದ್ದಾರೆ.

Share This Article