ಬಿಜೆಪಿಯಲ್ಲಿ ಕೆಜೆಪಿ‌ ಅಧ್ಯಕ್ಷರೇ ಜಾಸ್ತಿ ಇದ್ದಾರೆ – ಕುಮಾರ್ ಬಂಗಾರಪ್ಪ

Public TV
1 Min Read
Kumar Bangarappa

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರೋ ಜನಾಂದೋಲನ ಕಾರ್ಯಕ್ರಮವನ್ನ ಯತ್ನಾಳ್ ಟೀಂನ ರೆಬಲ್ ನಾಯಕ ಕುಮಾರ್ ಬಂಗಾರಪ್ಪ (Kumar Bangarappa) ಲೇವಡಿ ಮಾಡಿದರು.

BY Vijayendra meets BJP National President JP Nadda in Bengaluru

ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗ ಜನಾಂದೋಲನ ಅಂತ ಹೇಳ್ತಾರೆ. ಹಿಂದೆ ಅನೇಕ ವಿಷಯಗಳ ಬಗ್ಗೆ ಆಂದೋಲನ ಮಾಡೋಕೆ ಅವಕಾಶ ಇತ್ತು, ಆಗ ಅದನ್ನ ಮಾಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ನಮ್ಮ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನ ಬದಲಾವಣೆ ಮಾಡಿ ಅಂತ ಮಾತಾಡ್ತಾರೆ. ಅದು ಯಾಕೆ ಬೇಕು ಅವರಿಗೆ. ಅದಕ್ಕೆ ಈಗ ನಾವು ನಿಮ್ಮನ್ನ ಬದಲಾವಣೆ ಅಂತಿದ್ದೇವೆ. ಆಂದೋಲನ ಅನ್ನೋ ಪದದ ಅರ್ಥ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಅಂತ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಯಾರು ಯಡಿಯೂರಪ್ಪ ವಿರುದ್ಧ ಮಾತಾಡಿಲ್ಲ. ಜಿಲ್ಲಾ ಅಧ್ಯಕ್ಷರ ಚುನಾವಣೆ ‌ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅವರಿಗೆ ಬೇಕಾದವರಿಗೆ ಆಯ್ಕೆ ಮಾಡ್ತಿದ್ದಾರೆ, ಅದಕ್ಕೆ ಇದೆಲ್ಲ ಆಗಿದೆ. ಬಿಜೆಪಿಯಲ್ಲಿ ಕೆಜಿಪಿ ಟೀಂ ಆಗಿದೆ. ಕೆಜಿಪಿಯವರನ್ನೇ ನೇಮಕ ಮಾಡಿದ್ದಾರೆ. ಚುನಾವಣೆ ‌ಪ್ರಕ್ರಿಯೆ ಸರಿಯಾಗಿ ಆಗಿಲ್ಲ. ಅದಕ್ಕೆ ಚಿತ್ರದುರ್ಗ, ದಾವಣಗೆರೆ, ಹಲವು ಕಡೆ ವಿರೋಧ ಬಂದಿದೆ ಅಂತ ಪಕ್ಷದ ಚುನಾವಣೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಅಂತ ಕುಮಾರ್ ಬಂಗಾರಪ್ಪ ಆರೋಪ ಮಾಡಿದರು. ಇದನ್ನೂ ಓದಿ: ತುಮಕೂರು| 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

ಈಗ ಇರೋ ಅಧ್ಯಕ್ಷರ ಬದಲಾವಣೆ ಆಗೇ ಆಗುತ್ತದೆ. ಈಗಾಗಲೇ ಹೈಕಮಾಂಡ್ ನಾಯಕರಿಗೆ ನಮ್ಮ ವಿಷಯ ತಿಳಿಸಿದ್ದೇವೆ. ಅವಶ್ಯಕತೆ ಬಿದ್ದರೆ ಮತ್ತೆ ನಾವೆಲ್ಲರು ಹೈಕಮಾಂಡ್ ನಾಯಕರನ್ನ ಒಟ್ಟಾಗಿ ಭೇಟಿಯಾಗಿ ಮಾತುಕತೆ ಮಾಡ್ತೀವಿ‌ ಅಂತ ತಿಳಿಸಿದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

Share This Article