ಚುನಾವಣೆಗೆ ವರ್ಷವಿರುವಾಗಲೇ ಸಿದ್ದರಾಮಯ್ಯ ಸೋಲು ಒಪ್ಪಿಕೊಂಡಿದ್ದಾರೆ: ಬಿಜೆಪಿ

Public TV
1 Min Read
Siddramaiaha BJP

ಬೆಂಗಳೂರು: ಸಿದ್ದರಾಮಯ್ಯ ಅವರು ಚುನಾವಣೆಗೆ ವರ್ಷವಿರುವಾಗಲೇ ಸೋಲನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳಿದಿದೆ.

ಟ್ವೀಟ್‍ನಲ್ಲಿ ಏನಿದೆ?: ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಸೋತ ಭಯ, ಇಂದು ವಿಪಕ್ಷ ನಾಯಕನಾಗಿರುವಾಗಲೂ ಕಾಡುತ್ತಿದೆ. ಚುನಾವಣೆಗೆ ವರ್ಷವಿರುವಾಗಲೇ ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ? ಎಂದು ಟೀಕಿಸಿದೆ.

ಬುಧವಾರ ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇವಿಎಂ ಸಹ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ. ಇವಿಎಂ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲ ಚುನಾವಣಾ ಆಯೋಗ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದರು. ಇದನ್ನೂ ಓದಿ: ಇವಿಎಂ ತಿರುಚಬಹುದು ಅನ್ಸುತ್ತೆ: ವಿಧಾನಸಭೆಯಲ್ಲಿ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

evm 1490347648

ನನ್ನ ಬಳಿಯೂ ಒಬ್ಬ ವ್ಯಕ್ತಿ ಬಂದು ತೋರಿಸಿದ. ಹಾಕಿದ ಹತ್ತು ವೋಟ್‍ಗಳಲ್ಲಿ 7 ಬಿಜೆಪಿಗೆ, 3 ಕಾಂಗ್ರೆಸ್‍ಗೆ ಬಂತು. ಈ ವಿಚಾರ ನನಗೂ ಆಶ್ಚರ್ಯವಾಯಿತು. ಆದರೆ ನಾನು ತಜ್ಞನಲ್ಲ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇವಿಎಂ ಮ್ಯಾನ್ ಹ್ಯಾಂಡಲ್ ಯಂತ್ರವಾಗಿರುವುದರಿಂದ ಅದನ್ನೂ ಸಹ ತಿರುಚಬಹುದು ಅನ್ನಿಸುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ಸಿ.ಎಂ ಇಬ್ರಾಹಿಂ ರಾಜೀನಾಮೆ

Share This Article
Leave a Comment

Leave a Reply

Your email address will not be published. Required fields are marked *