ಬೆಂಗಳೂರು: ಟಗರು ಮತ್ತು ಬಂಡೆ ನಡುವೆ ಕಾದಾಟ ಆರಂಭಗೊಂಡಿದೆ. ಟಗರಿನ ಕೊಂಬು ಮುರಿಯಬಹುದೇ ಅಥವಾ ಬಂಡೆ ಪುಡಿಯಾಗಬಹುದೇ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಫೈಟ್ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
Advertisement
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಟಗರು ಮತ್ತು ಬಂಡೆ ನಡುವೆ ಕಾದಾಟ ಆರಂಭಗೊಂಡಿದೆ. ಟಗರಿನ ಕೊಂಬು ಮುರಿಯಬಹುದೇ ಅಥವಾ ಬಂಡೆ ಪುಡಿಯಾಗಬಹುದೇ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಕಾದಾಟದಲ್ಲಿ ಕಾಂಗ್ರೆಸ್ ಮನೆ ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಿರಮಿಸಲು ಪಣತೊಟ್ಟ ಈ ಇಬ್ಬರು ನಾಯಕರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು ಕುಟುಕಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ರಾಷ್ಟ್ರೀಯ ನಗ್ನ ದಿನ ರಹಸ್ಯ ಆಚರಣೆ
Advertisement
Advertisement
ಟ್ವೀಟ್‌ನಲ್ಲೇನಿದೆ?
ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗುವುದು ವಾಡಿಕೆ ಎಂದಿದ್ದ ಡಾ.ಜಿ.ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಬಣ ಸೋಲಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ! ʻತಾನು ಉಳಿಯಬೇಕೆಂದರೆ ಇನ್ನೊಬ್ಬರನ್ನು ಮಕಾಡೆ ಮಲಗಿಸುವʼ ತಂತ್ರದಿಂದ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವುದರಲ್ಲಿ ಸಂಶಯವಿಲ್ಲ.
Advertisement
ಕಾಂಗ್ರೆಸ್ ಮುಕ್ತ ಕರ್ನಾಟಕದ ಅಘೋಷಿತ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಾಲ್ವರು ನೇಮಕವಾಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ. ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಬೇರು ಸಮೇತ ಕಿತ್ತು ಹಾಕಲು ಇವರು ಭಾರೀ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್ ನೀಡಿದೆ. ಇದನ್ನೂ ಓದಿ: ಹಿಜಬ್ ವಿವಾದದ ಬೆನ್ನಲ್ಲೇ ಮುಸ್ಲಿಮರಿಂದ ಪಿಯು ಕಾಲೇಜು ಸ್ಥಾಪನೆಗೆ ಆಸಕ್ತಿ