ಜನ ಮೂರ್ಖರಲ್ಲ: ಡಿಕೆಶಿಗೆ ಬಿಜೆಪಿ ತಿರುಗೇಟು

Public TV
3 Min Read
BJP DKSHI

ಬೆಂಗಳೂರು: ತೆಲಂಗಾಣ ಸಚಿವ ಕೆಟಿಆರ್‌ಗೆ ಕಾಂಗ್ರೆಸ್ ಅಧಿಕಾರಕ್ಕೇರಿ ಬೆಂಗಳೂರು ಗತವೈಭವ ಮರಳಿ ತರುತ್ತೇವೆ ಎಂದು ಸವಾಲೆಸೆದಿದ್ದ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ಟ್ವೀಟ್ ತಿರುಗೇಟು ನೀಡಿದೆ.

ಟ್ವೀಟ್‍ನಲ್ಲಿ ಏನಿದೆ?:
ಬೆಂಗಳೂರಿನ ಗತವೈಭವದ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಟೆಂಡರ್ ಶ್ಯೂರ್ ರಸ್ತೆಯ ಹಗರಣ ನೆನಪಿಸಬೇಕೇ? ಚಂದ್ರಯಾನ ಯೋಜನೆಗಿಂತಲೂ ಹೆಚ್ಚಿನ ಹಣವನ್ನು ಮೈಸೂರು ರಸ್ತೆ ನಿರ್ಮಾಣಕ್ಕೆ ಬಳಸಿದ್ದನ್ನು ರಾಜ್ಯದ ಜನತೆ ಮರೆತಿಲ್ಲ.

ಡಿಕೆಶಿ ಅವರೇ, ಮಾಜಿ ಸಚಿವ ಕೆ.ಜೆ. ಜಾರ್ಜ್ ಬಿಬಿಎಂಪಿಗೆ ಬಾಕಿ ಉಳಿಸಿಕೊಂಡಿದ್ದ ತೆರಿಗೆ ಮೊತ್ತ ಎಷ್ಟು ಗೊತ್ತೇ? ಅದನ್ನು ಸಕಾಲದಲ್ಲಿ ಪಾವತಿಸಿದ್ದರೆ ಬೆಂಗಳೂರಿನ ಗತವೈಭವ ಸ್ಥಾಪನೆಗೆ ಅನುಕೂಲವಾಗುತ್ತಿತ್ತಲ್ಲವೇ? ಗ್ರೀನ್ ಬೆಲ್ಟ್ ಪರಿಷ್ಕರಣೆ ಸಂದರ್ಭದಲ್ಲಿ ನಡೆದ ಗೋಲ್ ಮಾಲ್ ಕೂಡಾ ಕಾಂಗ್ರೆಸ್ ಗತವೈಭವದ ಭಾಗವೇ ಎಂದು ಟೀಕಿಸಿದೆ.

ಜನರ ಆದೇಶ ಇಲ್ಲದಿದ್ದರೂ, ಬಿಬಿಎಂಪಿ ಕೌನ್ಸಿಲ್‍ನಲ್ಲಿ ಹಿಂಬಾಗಿಲ ಮೂಲಕ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು, ಮೇಯರ್ ಉಪಮೇಯರ್ ಸ್ಥಾನದ ಗೌರವಕ್ಕೆ ಚ್ಯುತಿ ತಂದ ಕಾಂಗ್ರೆಸ್ ನಾಯಕರಿಂದ ಬೆಂಗಳೂರಿನ ಗತವೈಭವದ ಬಗ್ಗೆ ಪಾಠ ಬೇಕಾಗಿಲ್ಲ.

ಬೆಂಗಳೂರಿನ ಮತದಾರರು ಕಾಂಗ್ರೆಸ್ ಗತವೈಭವ ನೋಡಿಯೇ ಉಪಚುನಾವಣೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ, ನಾಲ್ಕರಲ್ಲಿ ಭಾಜಪ ಗೆಲ್ಲಿಸಿದ್ದರು. ಮರೆತು ಹೋಗಿದ್ರೆ ಒಮ್ಮೆ ನೆನಪಿಸಿಕೊಳ್ಳಿ. 2023 ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣದಿರಿ, ಜನ ಮೂರ್ಖರಲ್ಲ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ಸ್ವಾಭಿಮಾನ ಅಡ್ಡಿಬರಲಿಲ್ಲವೇ: ಹೆಚ್‌ಡಿಕೆಗೆ ರೇಣುಕಾಚಾರ್ಯ ಪ್ರಶ್ನೆ

ದಲಿತ ಮುಖ್ಯಮಂತ್ರಿ ಇರಲಿ ಬಿಡಿ, ಕಡೇಪಕ್ಷ ನಿಮ್ಮದೇ ಪಕ್ಷದ ಚಿಹ್ನೆಯಲ್ಲಿ ಗೆದ್ದ ಹಿರಿಯ ಶಾಸಕ, ದಲಿತ ಸಮುದಾಯದ ಶಾಸಕರ ಮನೆಗೆ ಬೆಂಕಿ ಬಿದ್ದಾಗ, ನಿಮ್ಮ ಪಕ್ಷದ ನೇತಾರರು ನಡೆಸಿಕೊಂಡಿದ್ದ ರೀತಿಯು ಕಾಂಗ್ರೆಸ್ ಗತವೈಭವವನ್ನು ನೆನಪಿಸುತ್ತದೆ. ಇದನ್ನೂ ಓದಿ: ಶ್ರೀರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಮಾಡಬೇಡಿ: ಹೆಚ್.ಡಿ ಕುಮಾರಸ್ವಾಮಿ

ಉದ್ಯಾನನಗರಿ ಬೆಂಗಳೂರನ್ನು ಗಾರ್ಬಿಜ್ ಸಿಟಿ ಮಾಡಿದವರಿಂದ, ವೈಟ್ ಟಾಪಿಂಗ್ ರಸ್ತೆ ಮಾಡಿ, ರಸ್ತೆ ಮೇಲೆ ನೀರು ನಿಲ್ಲುವಂತೆ ಮಾಡಿರುವವರಿಂದ, ಕೋಟಿ ಕೋಟಿ ಹಣ ಲೂಟಿ ಮಾಡಲು ಹೊಂಚು ಹಾಕಿ ಸ್ಟೀಲ್ ಬ್ರಿಡ್ಜ್ ಮಾಡಲು ಹೋರಟವರಿಂದ, ಬೆಂಗಳೂರ ಗತ ವೈಭವ ತರಲು ಸಾಧ್ಯವೇ? ತಪ್ಪು ಮಾಹಿತಿ ನೀಡಲು ಇದೇನು ಡಿಜಿಟಲ್ ಅಭಿಯಾನವಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *