ಬೆಂಗಳೂರು: ವೋಟ್‌ಚೋರಿ ಆರೋಪ ಕುರಿತು ಕಾಂಗ್ರೆಸ್ (Congress) ಸಹಿ ಸಂಗ್ರಹ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ವೋಟ್ ಚೋರಿ (Vote Theft) ಮಾಡಿ ಅಧಿಕಾರ ಅನುಭವಿಸಿದವರು ಕಾಂಗ್ರೆಸ್‌ನವರು. ಅವರು ಒಂದು ಕೋಟಿ ಸಹಿ ಸಂಗ್ರಹ ಮಾಡಿದರೆ ನಾವು 7 ಕೋಟಿ ಜನರ ಸಹಿ ಸಂಗ್ರಹಿಸುತ್ತೇವೆ ಎಂದು ಟಕ್ಕರ್ ಕೊಟ್ಟಿದ್ದಾರೆ.ಇದನ್ನೂ ಓದಿ: Kolar | ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲ್ಯಕ್ಷ ಆರೋಪ – ಹೆರಿಗೆ ವೇಳೆ ಮಗು ಸಾವು
ರಾಹುಲ್ ಗಾಂಧಿ ಮಾಡಿರುವ ವೋಟ್ ಚೋರಿ ಆರೋಪಕ್ಕೆ ಇದುವರೆಗೂ ಒಂದೂ ದಾಖಲೆ ಕೊಟ್ಟಿಲ್ಲ. ರಾಹುಲ್ ಗಾಂಧಿ ಸುಮ್ಮನೆ ಒಂದು ಸ್ಕ್ರೀನ್ ತೋರಿಸಿ ಸುಳ್ಳು ಹೇಳುತ್ತಾರೆ. ಕಾನೂನು ಉಲ್ಲಂಘನೆ ಆಗಿದ್ರೆ ಕೋರ್ಟ್ಗೆ ದೂರು ಕೊಡಲಿ. ಅಲ್ಲಿ ದೂರು ಕೊಟ್ಟರೆ ಈ ಕಾಂಗ್ರೆಸ್ ಕಳ್ಳರೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಾಲೂರಿನಲ್ಲಿ ಇವರೇ ವೋಟ್ ಚೋರಿ ಮಾಡಿ ಕೋರ್ಟ್ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಲ್ಲಿನ ಡಿಸಿ ವಿರುದ್ಧವೂ ಕ್ರಮ ಆಗಿದೆ. ಕಾಂಗ್ರೆಸ್ ಶಾಸಕರ ಸದಸ್ಯತ್ವ ಅಸಿಂಧುಗೊಂಡಿದೆ. ಇಷ್ಟೆಲ್ಲ ಮಾಡಿದವರು ಯಾರು ಅಂದರೆ ಕಾಂಗ್ರೆಸ್‌ನವರು. ದೇಶದಲ್ಲಿ ಬುದ್ದಿಗೆಟ್ಟ ನಾಯಕ ರಾಹುಲ್ ಗಾಂಧಿ. ಸೈನಿಕರಿಗೂ ರಿಸರ್ವೇಷನ್ ಬೇಕು ಅಂತಾರೆ. ಬುದ್ಧಿಹೀನರು ಇವರು. ನಾಚಿಕೆಗೇಡು, ಇವರಿಗೆ ಸ್ವಲ್ಪವೂ ಬುದ್ಧಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ರಾಹುಲ್ ಗಾಂಧಿಗೆ ವೋಟ್ ಚೋರಿ ಬಗ್ಗೆ ಮಾತಾಡುವ ನೈತಿಕತೆಯೇ ಇಲ್ಲ. ಮೊದಲು ಕೋಲಾರದಲ್ಲಿ ಆಗಿರುವ ವೋಟ್ ವೋರಿ ಬಗ್ಗೆ ಮಾತಾಡಲಿ. ಧೈರ್ಯ ಇದ್ದರೆ ಡಿಕೆಶಿ, ಸಿದ್ದರಾಮಯ್ಯ ಮಾತಾಡಲಿ ಎಂದು ಸವಾಲೆಸೆದಿದ್ದಾರೆ.ಇದನ್ನೂ ಓದಿ: ಕಲಾವಿದರಿಗೆ ರಕ್ಷಿತಾ ಅವಮಾನ? ಕಿಚ್ಚನ ಪಂಚಾಯ್ತಿ ಕಟ್ಟೆಯಲ್ಲಿ ಬಿರುಸಿನ ಚರ್ಚೆ

