ಬೆಂಗಳೂರು: ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಈ ಕುರಿತಾಗಿ ಆಢಳಿತ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದೆ.
ಟ್ವೀಟ್‍ನಲ್ಲಿ ಏನಿದೆ?: ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಲು ಸಿದ್ದ ಎಂದು ಮಾಜಿ ಲಕ್ಕಿಡಿಪ್ ಸಿಎಂ ಎಚ್‍ಡಿಕೆ ಘೋಷಿಸಿದ್ದಾರೆ. ಜಿಲ್ಲಾಪಂಚಾಯತ್, ವಿಧಾನ ಪರಿಷತ್ ಚುನಾವಣೆಗೂ ಕುಟುಂಬಸ್ಥರನ್ನೇ ಆಯ್ಕೆ ಮಾಡುವ ಜೆಡಿಎಸ್, ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುವ ಮಾತು ಕಾರ್ಯಸಾಧುವೇ? ಕುಮಾರಸ್ವಾಮಿ ಅವರಲ್ಲಿ, ಕಣ್ಣೀರು ಮತ್ತು ಸುಳ್ಳು ಇದಕ್ಕೆ ಬರವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಚಿಕನ್ ಖರೀದಿ ಮಾಡುವಾಗ ಗಲಾಟೆ – ಯುವಕ ಬರ್ಬರ ಹತ್ಯೆ
Advertisement
ಮಾಜಿ #LuckyDipCMHDK ಅವರೇ,
ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾರೆ ಯಾವ ಪಕ್ಷದಿಂದ ಎಂದು ಮೊದಲು ಸ್ಪಷ್ಟಪಡಿಸಿಬಿಡಿ, ಏಕೆಂದರೆ ನೀವು ಅತಂತ್ರದ ಆಕಾಂಕ್ಷಿ.
ಜೆಡಿಎಸ್ ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
— BJP Karnataka (@BJP4Karnataka) April 6, 2022
ಮಾಜಿ ಲಕ್ಕಿಡಿಪ್ ಸಿಎಂ ಎಚ್‍ಡಿಕೆ ಅವರೇ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಾರೆ, ಯಾವ ಪಕ್ಷದಿಂದ ಎಂದು ಮೊದಲು ಸ್ಪಷ್ಟಪಡಿಸಿಬಿಡಿ. ಏಕೆಂದರೆ ನೀವೇ ಅತಂತ್ರದ ಆಕಾಂಕ್ಷಿ ಜೆಡಿಎಸ್ ಪಕ್ಷದಿಂದಲೇ ದಲಿತ ಸಿಎಂ ಆಗುವುದಾದರೆ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌ಡಿಕೆ
Advertisement
ಜೆಡಿಎಸ್ ಪಕ್ಷದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ #LuckyDipCMHDK ಅವರು ಸ್ಪಷ್ಟನೆ ನೀಡಬಹುದು.
ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ.
ರಬ್ಬರ್ ಸ್ಟ್ಯಾಂಪ್ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ?
— BJP Karnataka (@BJP4Karnataka) April 6, 2022
ಜೆಡಿಎಸ್ ಪಕ್ಷದಲ್ಲಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಮಾಜಿ ಲಕ್ಕಿ ಡಿಪ್ ಸಿಎಂ ಎಚ್‍ಡಿಕೆ ಅವರು ಸ್ಪಷ್ಟನೆ ನೀಡಬಹುದು. ಅದು ಹೆಸರಿಗೆ ಮಾತ್ರ ಎಂದು ಎಲ್ಲರಿಗೂ ತಿಳಿದಿದೆ. ನಿರ್ಧಾರ ಬರುವುದೆಲ್ಲಾ ಪದ್ಮನಾಭನಗರ ಹಾಗೂ ಬಿಡದಿ ತೋಟದ ಮನೆಯಿಂದ ಎಂಬುದು ಲೋಕ ಸತ್ಯ ರಬ್ಬರ್ ಸ್ಟ್ಯಾಂಪ್ಗಳ ಸೃಷ್ಟಿಯಲ್ಲಿ ನೀವು ಎತ್ತಿದ ಕೈ ಅಲ್ಲವೇ ? ಕುಮಾರಸ್ವಾಮಿ ವಿರುದ್ದ ಬಿಜೆಪಿ ಕಿಡಿಕಾರಿದೆ.