ತುಮಕೂರು: `ಹಿಂದೂ’ ಪದದ (Hindu Word) ಅರ್ಥ ಅಶ್ಲೀಲ ಎಂಬ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿಕೆ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದೆ. ಈ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸಹ ಕಿಡಿಕಾರಿದ್ದಾರೆ.
Advertisement
ತುಮಕೂರಿನಲ್ಲಿಂದು (Tumkur) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದೂ ಪದ ಅಶ್ಲೀಲವಲ್ಲ, ಕಾಂಗ್ರೆಸ್ಸೇ ಅಶ್ಲೀಲ. ಇಷ್ಟು ದಿನ ಕಾಂಗ್ರೆಸ್ಸಿಗರು ಹಿಂದೂಗಳನ್ನ ಅವಮಾನ ಮಾಡುತ್ತಾ ಅಲ್ಪಸಂಖ್ಯಾತರ ಮತ ಪಡೆದುಕೊಂಡು ಅಧಿಕಾರದ ಕುರ್ಚಿ ಮೇಲೆ ಕುಳಿತಿದ್ರು ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಮತಕ್ಕಾಗಿ ಹಿಂದೂಗಳ ಅವಹೇಳನ ಮಾಡ್ತಿರೋದು ನೀಚ ಕೆಲಸ – ಜಾರಕಿಹೊಳಿ ವಿರುದ್ಧ ಮುತಾಲಿಕ್ ಆಕ್ರೋಶ
Advertisement
Advertisement
ಈಗ ಇಡೀ ರಾಜ್ಯ ಮತ್ತು ದೇಶದ ಜನಕ್ಕೆ ಕಾಂಗ್ರೆಸ್ಸೇ ಒಂದು ಅಶ್ಲೀಲ ಅಂತ ಗೊತ್ತಾಗಿದೆ. ಹಾಗಾಗಿ ಜನ ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ. ಈಗಾಗಲೇ ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಮುಂದೆಯೂ ಬೆಲೆ ತೆರುತ್ತಾರೆ. ಇನ್ನೂ 5 ತಿಂಗಳಲ್ಲಿ ಚುನಾವಣೆ (Election ಇದೆ. ವೋಟ್ ಬ್ಯಾಂಕ್‌ಗಾಗಿ (Vote Bank) ಕಾಂಗ್ರೆಸ್ ಈ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ
Advertisement
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ (Dk Shivakumar) ತಾಕತ್ ಇದ್ರೆ ಇವತ್ತು ಸತೀಶ್ ಜಾರಕಿಹೊಳಿಯನ್ನ ಪಕ್ಷದಿಂದ ಹೊರಗೆಹಾಕಲಿ. ಮಗು ಚಿವುಟೊದು, ತೊಟ್ಟಿಲು ತೂಗೋದು ಎರಡು ಕೆಲಸವನ್ನ ಡಿಕೆಶಿ ಮಾಡಬಾರದು. ಹಿಂದೂ-ಮುಸ್ಲಿಂ (Hindu Muslim) ಇಬ್ಬರೂ ಒಟ್ಟಿಗೆ ಹೋಗೋದಕ್ಕೆ ಇವರು ಬಿಡ್ತಿಲ್ಲ. ಪ್ರತ್ಯೇಕವಾಗಿ ಇಡುವಂತಹ ವಿಶೇಷ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ. ಈ ಹಿಂದೆ ಪ್ರವಾದಿ ಬಗ್ಗೆ ಅವಹೆಳನಕಾರಿ ಹೇಳಿಕೆ ನೀಡಿದ್ದರಿಂದಾಗಿ ನೂಪುರ್ ಶರ್ಮಾರನ್ನ (Nupur Sharma) ಬಿಜೆಪಿ ಪಕ್ಷದಿಂದ ಅಮಾನತ್ತು ಮಾಡಿತು. ಅದೇ ರೀತಿ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಕಾಂಗ್ರೆಸ್ ತೊರಲಿ ಎಂದು ಸವಾಲ್ ಹಾಕಿದ್ದಾರೆ.