ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ (G. Parameshwa) ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ಬಿಜೆಪಿ (BJP) ಯುವ ಮೋರ್ಚಾ ಮುಖಂಡ ಪ್ರಶಾಂತ್ ಸೇರಿ 10 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರತಿಭಟನಾಕಾರರ ವಿರುದ್ಧ ಕೇಸ್ ದಾಖಲಾಗಿದೆ.
ಪ್ರತಿಭಟನಾಕಾರರ ವಿರುದ್ಧ ಐಪಿಸಿ ಸೆಕ್ಷನ್ 143 ಹಾಗೂ 149 ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿದೆ. ಇದನ್ನೂ ಓದಿ: ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್
ಗೃಹ ಸಚಿವ ಪರಮೇಶ್ವರ್ ಅವರು ಉಡುಪಿ (Udupi) ಕಾಲೇಜಿನ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆಗಳಲ್ಲಿ ಭಾಗಿಯಾಗಿದ್ದವರನ್ನು ಅಮಾಯಕರಾ ಎಂಬುದನ್ನು ಪರಿಶೀಲಿಸಿ ಎಂದು ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸದಾಶಿವನಗರದ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಯತ್ನಿಸಿದ್ದರು.
ಬಳಿಕ ಸಚಿವರು ಪ್ರತಿಕ್ರಿಯಿಸಿ, ಗಲಭೆ ಕೇಸ್ ವಾಪಾಸ್ ಪಡೆಯಲು ಸೂಚಿಸಿಲ್ಲ. ಶಾಸಕರು ಒಂದು ಪತ್ರ ಬರೆದ್ದಿದ್ದಾರೆ. ಅದನ್ನು ಪರಿಶೀಲಿಸಿ ಎಂದು ಹೇಳಿದ್ದೇನೆ. ಬಸವರಾಜ್ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ರಾಜಕೀಯ ಮಾಡುತ್ತಿದ್ದಾರೆ. ಅವರಿಬ್ಬರೂ ಸಹ ಗೃಹ ಮಂತ್ರಿಯಾಗಿದ್ದವರು. ಅವರಿಗೆ ಅರಿವಿಲ್ಲವೇ ಎಂದಿದ್ದರು.
ಉಡುಪಿ ಕಾಲೇಜಿನ ಪ್ರಕರಣವನ್ನು ಕಾಲೇಜಿನ ಆಡಳಿತ ಮಂಡಳಿ ನೋಡಿಕೊಳ್ಳಲಿದೆ. ಆದರೆ ಅದು ಮಕ್ಕಳಾಟ ಎಂದು ಹೇಳಿಲ್ಲ. ಪ್ರಾಂಶುಪಾಲರು ಆ ವಿದ್ಯಾರ್ಥಿಗಳನ್ನು ಈಗಾಗಲೇ ಸಸ್ಪೆಂಡ್ ಮಾಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ಮೇಲೆ ವಿಚಾರ ತಿಳಿಯಲಿದೆ ಎಂದಿದ್ದರು. ಇದನ್ನೂ ಓದಿ: ಬಸವಸಾಗರ ಜಲಾಶಯ ಭರ್ತಿ – ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ರಿಲೀಸ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]