-ಸಿಎಂ ಮನೆ ಮುತ್ತಿಗೆಗೆ ಯತ್ನ, ರಸ್ತೆ ತಡೆ ಮೂಲಕ ಆಕ್ರೋಶ
ಬೆಂಗಳೂರು: ಸರ್ಕಾರದ ದರ ಏರಿಕೆ (Price Hike) ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಿದೆ. ಬುಧವಾರದಿಂದ ನಡೆಯುತ್ತಿರುವ ಬಿಜೆಪಿ (BJP) ಅಹೋರಾತ್ರಿ ಧರಣಿ ಇಂದು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿ ನಾಯಕರು, ಅಪಾರ ಕಾರ್ಯಕರ್ತರು ಸಿಎಂ ಮನೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರಿಗೂ ಪ್ರತಿಭಟನಾಕಾರರಿಗೂ ಜಟಾಪಟಿ ನಡೆಯಿತು.
ಬೆಂಗಳೂರಿನ (Bengaluru) ಫ್ರೀಡಂ ಪಾರ್ಕಿನಲ್ಲಿ (Freedom Park) ಬುಧವಾರದಿಂದ ಬಿಜೆಪಿ ನಡೆಸುತ್ತಿದ್ದ ಅಹೋರಾತ್ರಿ ಧರಣಿಯಲ್ಲಿ ಇಂದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಂಡಿದ್ದರು. ನಾಯಕರೆಲ್ಲ ಮಾತಾಡಿದ ಮೇಲೆ ಯಡಿಯೂರಪ್ಪ ಮುಂದಾಳತ್ವದಲ್ಲಿ ಸಿಎಂ ಮನೆ ಮುತ್ತಿಗೆಗೆ ನಾಯಕರು, ಕಾರ್ಯಕರ್ತರು ಮುಂದಾದರು. ಪ್ರತಿಭಟನಾ ಸ್ಥಳದಿಂದ ಯಡಿಯೂರಪ್ಪ ಜೊತೆಗೆ ನಾಯಕರು, ಕಾರ್ಯಕರ್ತರು ರಸ್ತೆಗೆ ಇಳಿದರು. ಆದರೆ ಅಷ್ಟರೊಳಗೆ ನಾಕಾಬಂದಿ ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ಎರಡು ಬದಿ ತಡೆದು ಸಿಎಂ ಮನೆ ಮುತ್ತಿಗೆ ವಿಫಲಗೊಳಿಸಿದರು.ಇದನ್ನೂ ಓದಿ: ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರ ಹೋರಾಟ: ಯಡಿಯೂರಪ್ಪ
<
ಕಾಂಗ್ರೆಸ್ಸಿಗರೇ, ನೀವೆಷ್ಟೇ ಪ್ರಯತ್ನಿಸಿದರೂ ನಮ್ಮ ಹೋರಾಟ ನಿಲ್ಲದು !
ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ಜನವಿರೋಧಿ ನೀತಿ ಖಂಡಿಸಿ ನಮ್ಮ ಪ್ರತಿಭಟನೆ ನಿರಂತರ…
ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಿದಷ್ಟೂ ತೀವ್ರಗೊಳ್ಳಲಿದೆ ನಮ್ಮ ಹೋರಾಟ… ರಾಜ್ಯದಾದ್ಯಂತ ನಮ್ಮ ಹೋರಾಟ ಪ್ರಾರಂಭವಾಗಲಿದೆ.
ಬೆಲೆ ಏರಿಕೆಯ ಬರೆಯಿಂದ… pic.twitter.com/bLDOTJEGs2
— BJP Karnataka (@BJP4Karnataka) April 3, 2025
ಇದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋ ಇದ್ದ ರಾವಣನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಯಕರ್ತೆಯರು ಎಮ್‌ಎಲ್‌ಸಿ ಭಾರತಿ ಶೆಟ್ಟಿ ನೇತೃತ್ವದಲ್ಲಿ ರಸ್ತೆಯಲ್ಲೇ ಕೂತು ಪ್ರತಿಭಟನೆಗೆ ಮುಂದಾದರು. ಕೊನೆಗೆ ಪೊಲೀಸರು ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್, ಸಿ.ಟಿ ರವಿ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು ಮುಂತಾದ ನಾಯಕರನ್ನು ವಶಕ್ಕೆ ಪಡೆದು ಬಸ್ ಮೂಲಕ ಕರೆದೊಯ್ದರು.
ಇನ್ನು ಪ್ರತಿಭಟನೆ ನಡೆಯುವಾಗಲೇ ವಕ್ಫ್ ಬಿಲ್ (Waqf Bill) ಪಾಸಾದ ಹಿನ್ನೆಲೆಯಲ್ಲಿ ನಾಯಕರು ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಒಟ್ಟಾರೆಯಾಗಿ ಎರಡು ದಿನಗಳ ಅಹೋರಾತ್ರಿ ಹೋರಾಟ ಮೂಲಕ ಸರ್ಕಾರಕ್ಕೆ ಬಿಜೆಪಿ ತಕ್ಕ ಮಟ್ಟಿಗೆ ಬಿಸಿ ಮುಟ್ಟಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾವಾರು ಹೋರಾಟ ತೀವ್ರಗೊಳಿಸಲು ಕೇಸರಿ ಪಡೆ ಮುಂದಾಗಿದೆ.ಇದನ್ನೂ ಓದಿ: ಭಂಡ ಸರ್ಕಾರ, ಸಿಎಂ ವಿರುದ್ಧ ಬೀದಿಗಿಳಿದು ಹೋರಾಟ ಮಾಡದೇ ಬೇರೆ ದಾರಿಯಿಲ್ಲ: ವಿಜಯೇಂದ್ರ