ಬೆಂಗಳೂರು: ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮತ್ತು 10 ಕೆಜಿ ಅಕ್ಕಿ ವಿತರಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ಇಂದು ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಚುನಾವಣೆಗೆ (Election) ಮುನ್ನ 5 ಗ್ಯಾರಂಟಿ (Congress Guarantee) ಜಾರಿ ಮಾಡುತ್ತೇವೆ ಎಂದು ಕಾಗ್ರೆಸ್ಸಿಗರು ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ಕೆಲವಂತೂ ಅನುಷ್ಠಾನಕ್ಕೆ ಸಾಧ್ಯವಿಲ್ಲದ ಷರತ್ತನ್ನು ವಿಧಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಮಾಜಿ ಡಿಸಿಎಂ ಅಶೋಕ್ (Ashok) ಮಾತನಾಡಿ, ಈ ಸರ್ಕಾರಕ್ಕೆ ಮಾನ ಮಾರ್ಯದೆ ಇದ್ಯಾ? ಬರೀ ಸುಳ್ಳು ಹೇಳುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. 24 ಗಂಟೆ ಆಯ್ತು, 24 ದಿನ ಕಳೆಯಿತು, 240 ದಿನ ಕಳೆದರೂ ಗ್ಯಾರಂಟಿ ಜಾರಿಯಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಅಲ್ಲ ಇವರು ಸುಳ್ಳುರಾಮಯ್ಯ ಎಂದು ಟೀಕಿಸಿದರು. ಇದನ್ನೂ ಓದಿ: ಕಸ ಎತ್ತಲ್ಲ, ಕೆಲಸ ಮಾಡಲ್ಲ – ಬಿಬಿಎಂಪಿಗೆ ಶಾಕ್ ಕೊಟ್ಟ ಬೆಂಗಳೂರು ಗುತ್ತಿಗೆದಾರರ ಸಂಘ
Advertisement
ಪ್ರತಿಭಟನೆ ನಡೆಸಲು ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂಂದು ಹೇಳಿ ಪೊಲೀಸರು ಅವರನ್ನೂ ವಶಕ್ಕೆ ಪಡೆದರು. ಪೊಲೀಸರ ನಡೆಗೆ ಗರಂ ಆದ ಬೊಮ್ಮಾಯಿ. ಕಾಂಗ್ರೆಸ್‌ನವರಿಗೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ನಮಗೆ ಅವಕಾಶ ನೀಡುತ್ತಿಲ್ಲ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಬೆಳಗ್ಗಿನಿಂದಲೇ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಆದರೆ ಪ್ರತಿಭಟನೆಗೆ ಮಳೆ ಅಡ್ಡಿ ಪಡಿಸಿತು. ಪ್ರತಿಭಟನೆ ನಡೆಯುವ ಮೊದಲೇ ಭಾರೀ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ಬಿಜೆಪಿ ನಾಯಕರನ್ನು ಮತ್ತು ಕಾರ್ಯಕರ್ತರ ವಶಕ್ಕೆ ಪಡೆದರು.