ಬೆಂಗಳೂರು: ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ಹೋಗಿ ಬಿಜೆಪಿ ನಾಯಕರು ಎಡವಟ್ಟು ಕೆಲಸ ಮಾಡಿದ್ದಾರೆ. ಹೌದು ಕಾಂಗ್ರೆಸ್ ಪಕ್ಷವನ್ನು ಅಣಕಿಸಲು ಹೋಗಿ ಕಾಂಗ್ರೆಸ್ ಗಿಡ ಎಂದೇ ಕರೆಯಲಾಗುವ ಪಾರ್ಥೇನಿಯಂ ಗಿಡಗಳನ್ನು ತಂದು ಬೆಂಗಳೂರಿನ ನಡುರಸ್ತೆಯಲ್ಲಿ ನೆಟ್ಟು ಎಡವಟ್ಟು ಮಾಡಿದ್ದಾರೆ.
ಗುರುವಾರ ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿ ವಾರ್ಡನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯನ್ನು ಮಾಡಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅನ್ನು ಅಣಕಿಸುವ ಸಲುವಾಗಿ ಬಿಜೆಪಿ ನಾಯಕರು ರಸ್ತೆಯಲ್ಲಿ ಪಾರ್ಥೇನಿಯಂ ಗಿಡನೆಟ್ಟಿದ್ದಾರೆ.
Advertisement
ಬೆಂಗಳೂರು ಪ್ರಸ್ತುತ ಪಾರ್ಥೇನಿಯಂ ಮುಕ್ತ ನಗರವಾಗಿದ್ದು, ಇದನ್ನು ಮಾಡಲು ಹಲವು ವರ್ಷಗಳ ಕಾಲ ಬಿಬಿಎಂಪಿ ಮತ್ತು ಬಿಡಿಎ ಸಾಕಷ್ಟು ಪ್ರಯತ್ನಗಳನ್ನು ಮಾಡಿತ್ತು. ಆದ್ರೆ ನಿನ್ನೆ ಬಿಜೆಪಿ ಪಕ್ಷದ ಸಿಟಿ ರೌಂಡ್ಸ್ ವೇಳೆ ಪಾರ್ಥೆನಿಯಂ ಗಿಡವನ್ನೆ ರಸ್ತೆ ಮಧ್ಯೆ ನೆಟ್ಟ ಬಿಜೆಪಿ ನಾಯಕರು ಮತ್ತೆ ನಗರಕ್ಕೆ ಪಾರ್ಥೇನಿಯಂ ಕಾಲಿಡುವಂತೆ ಮಾಡಿದ್ದಾರೆ.
Advertisement
ಈ ಹಿಂದೆ ಪಾರ್ಥೇನಿಯಂ ಎಂಬ ರಕ್ಕಸ ಇಡೀ ಸಿಲಿಕಾನ್ ಸಿಟಿಯನ್ನೇ ಆವರಿಸಿತ್ತು, ಪಾರ್ಥೇನಿಯಂ ಮಾರಿಯಿಂದ ಬೆಂಗಳೂರಿನ ನಿವಾಸಿಗಳನ್ನು ಅಸ್ತಮಾ ಆವರಿಸಿಕೊಂಡಿತ್ತು. ಈ ಒಂದು ಗಿಡ ಬರೋಬ್ಬರಿ 1 ಲಕ್ಷ ಗಿಡವನ್ನು ಹುಟ್ಟು ಹಾಕುವ ಶಕ್ತಿಯನ್ನು ಹೊಂದಿದೆ. ಇದರಿಂದ ಭಾರತದಲ್ಲೇ ನಂಬರ್ ಒನ್ ಅಸ್ತಮಾ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಪಡೆದಿತ್ತು.
Advertisement
ಆದರೆ ಕಾಂಗ್ರೆಸ್ ಪಕ್ಷವನ್ನು ಅಣಕಿಸುವ ನಡೆದ ಪ್ರತಿಭಟನೆಯಲ್ಲಿ ಈಗ ಬಿಜೆಪಿ ಪಾರ್ಥೇನಿಯಂ ಗಿಡದ ಅಪಾಯವನ್ನು ಅರಿಯಾದೆ ಅದನ್ನು ನಗರದ ರಸ್ತೆಗಳಲ್ಲಿ ನಾಟಿ ಮಾಡಿದೆ. ಪ್ರತಿಭಟನೆ ಮಾಡೋ ಭರದಲ್ಲಿ ಸಿಲಿಕಾನ್ ಸಿಟಿಯನ್ನು ಮತ್ತೆ ಪಾರ್ಥೇನಿಯಂ ಹಬ್ಬಿಸಲು ಬಿಎಸ್‍ವೈ, ಅಶೋಕ್ ನೇತೃತ್ವದಲ್ಲೇ ಸಿಟಿ ರೌಂಡ್‍ಗಳನ್ನು ಮಾಡಿದ್ದಾರೆ.
Advertisement