ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲವ್ ಜಿಹಾದ್ ನಡೆಸುವವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸುವುದಾಗಿ ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಲೋಕ ಕಲ್ಯಾಣ ಸಂಕಲ್ಪ ಪತ್ರ-2022 ಹೆಸರಿನ ಈ ಪ್ರಣಾಳಿಕೆಯಲ್ಲಿ ಕಳೆದರ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಕಟಿಸಿದ್ದ 212 ಸಂಕಲ್ಪಗಳಲ್ಲಿ ಶೇ.92 ರಷ್ಟು ಈಡೇರಿಸುವುದಾಗಿ ಹೇಳಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ನ್ನು ನಿಂದಿಸಿ, ನಿಮ್ಮ ಕೆಲಸ ಏನೆಂದು ಮರೆಯಬೇಡಿ: ಮೋದಿಗೆ ರಾಹುಲ್ ಗಾಂಧಿ ತಿರುಗೇಟು
Advertisement
Advertisement
ಅಧಿಕಾರಕ್ಕೆ ಮರಳಿದರೆ ಮುಂದಿನ ಐದು ವರ್ಷ ರೈತರ ನೀರಾವರಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯತ್, 14 ದಿನದೊಳಗೆ ರೈತರಿಗೆ ಕಬ್ಬಿನ ಬಾಕಿ ಪಾವತಿಸಬೇಕು. ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್, 2 ಕೋಟಿ ಟ್ಯಾಬ್ಲೆಟ್ ಹಾಘೂ ಸ್ಮಾರ್ಟ್ಫೋನ್ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ. ಇದನ್ನೂ ಓದಿ: ಹಿಜಬ್-ಕೇಸರಿ ಶಾಲು ವಿವಾದ ಮಕ್ಕಳಲ್ಲಿ ವಿಷ ಬೀಜ ಬಿತ್ತನೆ, ದೇಶಕ್ಕೆ ಮಾರಕ: ಸಚಿವ ಮುನಿರತ್ನ