ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವೇ ಎರಡನೇ ಬಾರಿ ಆಯ್ಕೆ ಆಗುವುದು ಬಹುತೇಕ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವಿಶ್ವಾಸ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಗಾಣಗಾಪುರದ ಶ್ರೀಗುರು ದತ್ತನ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಎರಡನೇ ಬಾರಿ ಸ್ಪರ್ಧಿಸುತ್ತಿರುವುದಾಗಿ ಖಚಿತಪಡಿಸಿದರು. ಇದನ್ನೂ ಓದಿ: ರಣಜಿ ಟ್ರೋಫಿಯಲ್ಲೂ ಕೊಹ್ಲಿಯದ್ದು ಅದೇ ಕಥೆ – 6 ರನ್‌ಗೆ ಔಟಾಗ್ತಿದ್ದಂತೆ ಮೈದಾನದಿಂದ ಹೊರಟ ಫ್ಯಾನ್ಸ್
ವಿಜಯಪುರ ಶಾಸಕ ಯತ್ನಾಳ್ (Basanagouda Patil Yatnal) ಮತ್ತು ರೆಬೆಲ್ಸ್ ತಂಡ ಪ್ರತ್ಯೇಕವಾಗಿ ಸಭೆ ನಡೆಸಿರುವ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಾಣಗಾಪುರದ ದತ್ತಾತ್ರೇಯ ಅವರಿಗೆ ಒಳ್ಳೆಯದು ಮಾಡಲಿ ಎಂದರು.
2ನೇ ಬಾರಿ ರಾಜ್ಯಾಧ್ಯಕ್ಷನಾಗಿ ಮುಂದುವರೆಯುವುದರಲ್ಲಿವಯಾವುದೇ ಅನುಮಾನ ಬೇಡ. ಒಂದರ್ಥದಲ್ಲಿ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಷ್ಟರ ಮಟ್ಟಿಗೆ ಚರ್ಚೆಯಾಗುತ್ತಿರುವುದು ಒಳ್ಳೆಯದು ಎಂದು ನುಡಿದರು. ಇದನ್ನೂ ಓದಿ: 1 ಲಕ್ಷ ಸಾಲಕ್ಕೆ ತಿಂಗಳಿಗೆ 30 ಸಾವಿರ ಬಡ್ಡಿ – ಹಣ ಕಟ್ಟಲಾಗದೇ ಫೈನಾನ್ಸರ್‌ನನ್ನೇ ಕಿಡ್ನ್ಯಾಪ್ ಮಾಡಿದ್ರು!
ರಾಜಕೀಯ ಪಕ್ಷ ಅಂದಮೇಲೆ ಕಷ್ಟ-ಸಂಕಷ್ಟ ಎರಡೂ ಇರುತ್ತದೆ. ಒಂದಂತು ಸತ್ಯ, ಐದಾರು ಜನ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಆಗಿಲ್ಲ ಅಂದ್ರೆ ನನ್ನ ಬಳಿ ಸಹ ಕೆಲವು ನ್ಯೂನತೆಗಳು ಇರಬಹುದು. ನನ್ನ ಕಡೆಯಿಂದ ತಿದ್ದಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇನೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಆ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ ಎಂದು ಆತ್ಮಾವಲೋಕನದ ಧಾಟಿಯಲ್ಲಿ ಒಪ್ಪಿಕೊಂಡರು.
ಗಾಣಗಾಪುರ ಭೇಟಿ ಕುರಿತು ಪ್ರಸ್ತಾಪಿಸಿದ ವಿಜಯೇಂದ್ರ, ಬಹಳ ದಿನಗಳಿಂದ ದತ್ತನ ದರ್ಶನಕ್ಕೆ ಬರಬೇಕು ಅಂದುಕೊಂಡಿದ್ದೆ. ಆಗಿರಲಿಲ್ಲ. ಈಗ ಬಂದಿರುವುದಾಗಿ ಹೇಳಿದರು. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ `ಲೋಕಾ’ ಶಾಕ್ – ಬೆಂಗಳೂರು ಸೇರಿ ರಾಜ್ಯದ 7 ಕಡೆ ಏಕಕಾಲಕ್ಕೆ ದಾಳಿ