ಬೆಂಗಳೂರು: ವಿಧಾನ ಪರಿಷತ್‍ನಲ್ಲಿಂದು (Vidhana Parishad) ಮತಾಂತರ ನಿಷೇಧ ವಿಧೇಯಕ (Anti Conversion Bill) ಮಂಡನೆ ಆಗಲಿದೆ. ವಿಧಾನಸಭೆಯಿಂದ ಅಂಗೀಕಾರವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2022ನ್ನು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಂಡನೆ ಮಾಡಲಿದ್ದಾರೆ.
Advertisement
ವಿಪಕ್ಷ ಕಾಂಗ್ರೆಸ್ (Congress) ಈ ಬಿಲ್‍ಗೆ ವಿಧಾನಸಭೆಯಲ್ಲಿ ವಿರೋಧಿಸಿತ್ತು. ಇದೀಗ ವಿಧಾನ ಪರಿಷತ್‍ನಲ್ಲೂ ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಪರಿಷತ್‍ನಲ್ಲಿ ಬಿಜೆಪಿಗೆ (BJP) ಬಹುಮತ ಇದ್ದು, ಬಹುತೇಕ ವಿಧೇಯಕ ಪಾಸ್ ಆಗಲಿದೆ. ಜೆಡಿಎಸ್ (JDS) ಕೂಡಾ ಬಿಲ್‍ಗೆ ವಿರೋಧಿಸುವ ಸಾಧ್ಯತೆ ಇದೆ. ಆಡಳಿತ-ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರದ ಡಬಲ್ ಗೇಮ್ ಬಯಲು – ಕೈ ಪ್ರಭಾವಿ ನಾಯಕ ಜಾರ್ಜ್ ಒತ್ತುವರಿ ಕಾಟಾಚಾರಕ್ಕೆ ತೆರವು
Advertisement
Advertisement
ಇತ್ತ ಆರ್‌ಎಸ್‌ಎಸ್ (RSS) ಮುಖಂಡರ ಜೊತೆ ಬಿಜೆಪಿಯ ಆಯ್ದ ಪರಿಷತ್ ಸದಸ್ಯರು ರಾತ್ರಿ ಚಾಮರಾಜಪೇಟೆಯ ಕೇಶವಾಕೃಪಾದಲ್ಲಿ ಸಭೆ ನಡೆಸಿದ್ರು. ಮತಾಂತರ ತಡೆ ವಿಧೇಯಕ ಬಗ್ಗೆ ಪರಿಷತ್‍ನಲ್ಲಿ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ವಿಧಾನ ಪರಿಷತ್‍ನಲ್ಲಿ ಈವರೆಗೆ ಮಸೂದೆಯನ್ನು ಸರ್ಕಾರ ಮಂಡಿಸಿರಲಿಲ್ಲ. ಮಸೂದೆ ಮಂಡಿಸುವ ತಡವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಪ್ರಸ್ತುತ ವಿಧಾನ ಪರಿಷತ್‍ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್‍ನ 26 ಮತ್ತು ಜೆಡಿಎಸ್‍ನ 8 ಸದಸ್ಯರಿದ್ದಾರೆ. ಹಾಗಾಗಿ ಸಂಖ್ಯಾಬಲದಲ್ಲಿ ಬಿಜೆಪಿ ಮೇಲುಗೈ ಸಾಧಿಸಿರುವುದರಿಂದ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಮನೆಯಲ್ಲಿ ನಾಯಿ ಸಾಕುವ ವಿಚಾರಕ್ಕೆ ಜಗಳ- ತಾಯಿ, ಮಗಳು ಆತ್ಮಹತ್ಯೆ