ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?

Public TV
2 Min Read
Rahul Gandhi Ashok Gehlot And Sachin Pilot

ಜೈಪುರ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಕಾಂಗ್ರೆಸ್‍ನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮಂದಾಗುತ್ತಿದ್ದಂತೆ ರಾಜಸ್ಥಾನದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಶಾಸಕರ (MLAs) ಜೊತೆ ಸಂಧಾನ ಮಾತುಕತೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್ ಹಿರಿಯ ನಾಯಕರು ಮರಳಿ ದೆಹಲಿಗೆ ವಾಪಸ್ ಆಗಿದ್ದಾರೆ. ಈ ಹೈಡ್ರಾಮಾದ ನಡುವೆ ರಾಜಸ್ಥಾನದಲ್ಲೂ ಬಿಜೆಪಿ (BJP) ಸರ್ಕಾರ ರಚಿಸಲು ಅವಕಾಶವೊಂದು ಕೂಡಿಬಂದಿದೆ.

BJP LOGO

ಈ ಎಐಸಿಸಿ (AICC) ಅಧ್ಯಕ್ಷ ಹುದ್ದೆಗೆ ಗೆಹ್ಲೋಟ್ ಸ್ಪರ್ಧಿಸುತ್ತಿರುವ ಕಾರಣ ಮತ್ತು ಕಾಂಗ್ರೆಸ್‍ನಲ್ಲಿ ಒಬ್ಬರಿಗೆ ಒಂದೇ ಹುದ್ದೆ ನೀತಿ ಅನ್ವಯ ಸಿಎಂ ಹುದ್ದೆ ತ್ಯಜಿಸಲು ಗೆಹ್ಲೋಟ್ ಮುಂದಾಗಿದ್ದಾರೆ. ಗೆಹ್ಲೋಟ್ ಕಾಂಗ್ರೆಸ್ ಮುಖ್ಯಸ್ಥರಾಗಿ ಆಯ್ಕೆಯಾದರೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಸ್ಥಾನವನ್ನು ಹೊಸ ತಲೆಮಾರಿನವರಿಗೆ ಕೊಡಬೇಕೆಂದು ಹೇಳಿದ್ದರು. ಈ ಕಾರಣಕ್ಕೆ ಸಚಿನ್ ಪೈಲಟ್‍ಗೆ (Sachin Pilot) ಸಿಎಂ ಪಟ್ಟ ಸಿಗುವ ಸಾಧ್ಯತೆ ಇತ್ತು. ಜೊತೆಗೆ ಪೈಲಟ್ ಆಯ್ಕೆಗೆ ಹೈಕಮಾಂಡ್ ಕೂಡ ಒಲವು ತೋರಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಗೆಹ್ಲೋಟ್ ಬಣದ ಶಾಸಕರು ಹೈಡ್ರಾಮಾ ನಡೆಸಿದ್ದಾರೆ. ಸಚಿನ್ ಪೈಲಟ್ ಅವರಿಗೆ ಸಿಎಂ ಸ್ಥಾನವನ್ನು ನೀಡುವ ಬದಲು ನಮ್ಮಲ್ಲಿಯೇ ಯಾರಾದರೂ ಅನುಭವಿ ರಾಜಕಾರಣಿಗಳಿಗೆ ಸಿಎಂ ಸ್ಥಾನ ನೀಡಿ ಎಂದು ಪಟ್ಟುಹಿಡಿದು ಗೆಹ್ಲೋಟ್ ಬಣದ 90 ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಹೈಡ್ರಾಮಾ – ಗೆಹ್ಲೋಟ್ ಬಣದ 90ಕ್ಕೂ ಹೆಚ್ಚು ಶಾಸಕರಿಂದ ರಾಜೀನಾಮೆ ಎಚ್ಚರಿಕೆ

Ashok Gehlot 1

ಪೈಲಟ್‍ಗೆ ಸಿಎಂ ಪಟ್ಟಕ್ಕೆ ಗೆಹೋಟ್ ಬಣ ವಿರೋಧ ವ್ಯಕ್ತಪಡಿಸಿದ್ದು, ಈಗಾಗಲೇ ನಿನ್ನೆಯಿಂದ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಗೆಹ್ಲೋಟ್ ಬಣದ 90 ಶಾಸಕರ ರಾಜೀನಾಮೆ ಬೆದರಿಕೆ ಹಾಕಿದ್ದು, ಕಾಂಗ್ರೆಸ್ ಶಾಸಕಾಂಗ ಸಭೆಗೂ ಗೈರಾಗಿದ್ದಾರೆ. ಭಾರೀ ಹೈಡ್ರಾಮಾದ ನಡುವೆಯೆ ಶಾಸಕರು ಕಾಂಗ್ರೆಸ್ ತೊರೆಯುವುದಾಗಿಯೂ ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೇನ್ ಡ್ಯಾಮೇಜ್ ಕಂಟ್ರೋಲ್‍ಗೆ ಬಂದಿದ್ದರು. ಆದರೆ ಈ ವೇಳೆ ಬಂಡಾಯ ಶಾಸಕರು ಮಾತುಕತೆಗೆ ಒಪ್ಪಿಲ್ಲ. ಮಾತುಕತೆಗೆ ಒಪ್ಪದ ಹಿನ್ನೆಲೆ ಖರ್ಗೆ, ಮಾಕೇನ್ ದೆಹಲಿಗೆ ವಾಪಸ್ ಆಗಿದ್ದು, ಇಂದು ವರಿಷ್ಠೆ ಸೋನಿಯಾಗಾಂಧಿ (Sonia Gandhi) ಭೇಟಿಯಾಗಿ ವರದಿ ಸಲ್ಲಿಕೆ ಮಾಡಲಿದ್ದಾರೆ. ಇದನ್ನೂ ಓದಿ: ಐಸಿಸ್ ಜೊತೆ ಸಂಪರ್ಕದ ಶಂಕೆ, ಮತ್ತೊಬ್ಬನ ಬಂಧನ – ಗಂಗಾವತಿಯಲ್ಲಿ ಖಾಕಿ ಕಣ್ಗಾವಲು

sachin pilot 1

ಮುಂದೇನು?
ರಾಜಸ್ಥಾನದಲ್ಲಿ ಅಸೆಂಬ್ಲಿ ಹಾಲಿ ಸಂಖ್ಯಾ ಬಲ 200. ಬಹುಮತಕ್ಕೆ 101 ಶಾಸಕರ ಬಲ ಬೇಕು. 100 ಶಾಸಕರಿರುವ ರಾಜಸ್ಥಾನ ಕಾಂಗ್ರೆಸ್‍ಗೆ 6 ಬಿಎಸ್‍ಪಿ, 13 ಪಕ್ಷೇತರರ ಬೆಂಬಲ ನೀಡಿ ಸರ್ಕಾರ ರಚನೆಯಾಗಿತ್ತು. ಇದೀಗ ಗೆಹ್ಲೋಟ್ ಬಣದ 92 ಶಾಸಕರು ರಾಜೀನಾಮೆ ನೀಡಿದರೆ ಕಾಂಗ್ರೆಸ್ ಬಲ 8ಕ್ಕೆ ಕುಸಿತ ಕಾಣಲಿದೆ. ಆಗ ಸದನದ ಬಲ 108ಕ್ಕೆ ಇಳಿಕೆಯಾಗುತ್ತದೆ. ಬಹುಮತಕ್ಕೆ 55 ಸಂಖ್ಯಾ ಬಲವಾಗಿರುತ್ತದೆ. ಹಾಗಾದಲ್ಲಿ 70 ಶಾಸಕರಿರುವ ಬಿಜೆಪಿಗೆ ಅಧಿಕಾರಕ್ಕೇರುವ ಅವಕಾಶ ಇದೆ.

Live Tv
[brid partner=56869869 player=32851 video=960834 autoplay=true]

Share This Article