ಬೆಂಗಳೂರು: ವಿಧಾನಸಭೆ ಚುನಾವಣೆ (Election) ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ತಾಲೀಮು ಆರಂಭವಾಗಿದೆ. ರಾಜ್ಯದಲ್ಲಿ ಈ ಸಲ ಸ್ವಂತ ಬಲದಲ್ಲೇ ಅಧಿಕಾರ ಪಡೆಯಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಈ ಭಾಗವಾಗಿಯೇ ಕದನ ಕಲಿಗಳ ಆಯ್ಕೆಗೆ ಬಿಗ್ ಪ್ಲಾನ್ ಹೆಣೆಯಲಾಗಿದೆ.
ಟಿಕೆಟ್ ಹಂಚಿಕೆಗೆ ಬಿಜೆಪಿ 3 ಸೂತ್ರಕ್ಕೆ ಗಂಟು ಬಿದ್ದಿದೆ. ಈ ‘ತ್ರೀ’ ಫಾರ್ಮುಲಾದೊಂದಿಗೆ ಗೆಲ್ಲುವ ಹುರಿಯಾಳುಗಳ ಹುಡುಕಾಟಕ್ಕೆ ಬಿಜೆಪಿ ಕಸರತ್ತು ನಡೆಸುತ್ತಿದೆ. ಆ ಮೂರು ಅಗ್ನಿಪರೀಕ್ಷೆಗಳಲ್ಲಿ ಪಾಸಾದ್ರೆ ಮಾತ್ರ ಟಿಕೆಟ್ ಫಿಕ್ಸ್.
Advertisement
Advertisement
ಈ ಬಾರಿ ಭಾರೀ ಎಚ್ಚರದ ನಡೆ ಅನುಸರಿಸಿ ಹುರಿಯಾಳುಗಳ ಆಯ್ಕೆಗೆ ಬಿಜೆಪಿ (BJP) ಕೈಹಾಕಿದೆ. ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ‘ತ್ರೀ’ ಫಾರ್ಮುಲಾದ ಮೊರೆ ಹೋಗಿದೆ ಬಿಜೆಪಿ. ಹುರಿಯಾಳುಗಳ ಹುಡುಕಾಟಕ್ಕೆ 3 ಪ್ರಮುಖ ವಲಯದಿಂದ ಆಂತರಿಕ ಸಮೀಕ್ಷೆಗೆ ಚಾಲನೆ ಕೊಡಲಾಗಿದೆ. 3 ಹಂತದ ಅಗ್ನಿಪರೀಕ್ಷೆ ಪಾಸಾದವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ.
Advertisement
ಬಿಜೆಪಿಯ ಆ ಮೂರು ಅಗ್ನಿಪರೀಕ್ಷೆ ಹಂತಗಳು ಹೀಗಿವೆ: ಸಂಘ ಪರಿವಾರದಿಂದ ಸಮೀಕ್ಷೆ, ಬಿಜೆಪಿ ಪಕ್ಷದಿಂದ ಸಮೀಕ್ಷೆ, ಜನಾಭಿಪ್ರಾಯ ಆಧರಿಸಿದ ಸಮೀಕ್ಷೆಗಳಾಗಿವೆ. ಇದನ್ನೂ ಓದಿ: ತುಮಕೂರು ನಗರದ ಮುಂದಿನ ಶಾಸಕ ನಾನೇ: ಪ್ರಚಾರ ಆರಂಭಿಸಿದ ಆಕಾಂಕ್ಷಿ
Advertisement
ಈ ಮೂರು ಸಮೀಕ್ಷೆಗಳಲ್ಲಿ ಹೆಚ್ಚಿನ ಮಾರ್ಕ್ಸ್ ಬಂದ್ರೆ ಮಾತ್ರ ಟಿಕೆಟ್ ಕೊಡಲಾಗುತ್ತದೆ. ಈ ಮೂರು ಸಮೀಕ್ಷೆಗಳ ಆಧಾರದಲ್ಲಿ ಅಂತಿಮ ನಿರ್ಧಾರವನ್ನು ಬಿಜೆಪಿ ಹೈಕಮಾಂಡ್ ಕೈಗೊಳ್ಳುತ್ತದೆ. ಗೆಲ್ಲುವ ತಾಕತ್ ಇರುವ, ಹೆಚ್ಚಿನ ಜನಪ್ರಿಯತೆ ಹೊಂದಿರುವ, ಕ್ಲೀನ್ ಇಮೇಜ್‌ವುಳ್ಳ, ಜನರ ಒಲವು ಇದ್ದವರಾಗಿದ್ರೆ ಮಾತ್ರ ಈ ಬಾರಿ ಟಿಕೆಟ್ ಸಿಗಲಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾನೇ ಸೇಫೆಸ್ಟ್ ಕ್ಷೇತ್ರ: ಕೆ.ಎನ್.ರಾಜಣ್ಣ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k