ಇಟಾನಗರ: ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿಯ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರುಣಾಚಲ ಪ್ರದೇಶದಿಂದ ಬಿಜೆಪಿಯ ವಿಜಯೋತ್ಸವ ಆರಂಭವಾಗಿದೆ. ರಾಜ್ಯದ ಅಲೋ ಪೂರ್ವ ಕ್ಷೇತ್ರದಿಂದ ಕೆಂಟೋ ಜಿನಿ ಜಯಗಳಿಸಿದ್ದಾರೆ. ಯಚುಲಿ ಕ್ಷೇತ್ರದಿಂದ ತಾಬಾ ತೆಡಿರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಟ್ವೀಟ್ ಮಾಡಿದ್ದಾರೆ.
Advertisement
Victory March of BJP starts from Arunachal Pradesh:
Sir Kento Jini has won (uncontested) from Alo East constituency.
— Ram Madhav (@rammadhav_) March 26, 2019
Advertisement
ಈ ಎರಡೂ ಕ್ಷೇತ್ರದಿಂದ ಕೇವಲ ಬಿಜೆಪಿ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಈ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
Advertisement
ಅರುಣಾಚಲ ಪ್ರದೇಶದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿಯು ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಉಳಿದಂತೆ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ.
Advertisement
2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 36, ಎನ್‍ಪಿಪಿ 16 ಹಾಗೂ ಐಎನ್‍ಡಿ 2, ಕಾಂಗ್ರೆಸ್ 6 ಕ್ಷೇತ್ರಗಳಿಂದ ಜಯಗಳಿಸಿತ್ತು. ಈ ಮೂಲಕ ಬಿಜೆಪಿಯು ಎನ್‍ಪಿಪಿ ಹಾಗೂ ಐಎನ್‍ಡಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.
Another victory also from Arunachal Pradesh:
Er Taba Tedir won unopposed from 16 Yachuli Assembly segment.
(These two victories are for Arunachal Pradesh Assembly, which goes to polls together with parliament on 11 April)
— Ram Madhav (@rammadhav_) March 26, 2019