DistrictsKarnatakaLatestMain PostUdupi

ಬಿಜೆಪಿ ಪಕ್ಷಕ್ಕೆ ಬೂತ್ ಮಟ್ಟದಲ್ಲೇ ರೀಚಾರ್ಜ್: ಸುನಿಲ್ ಕುಮಾರ್

ಉಡುಪಿ: ಕಾಂಗ್ರೆಸ್ ರೀತಿಯಲ್ಲಿ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ. ನಮ್ಮ ಪಕ್ಷದ ರಿಚಾರ್ಜ್ ನಮ್ಮ ಬೂತ್‍ಗಳಲ್ಲಿ ನಡೆಯುತ್ತದೆ. ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತರ ಕೈಯಲ್ಲಿದೆ ಎಂದು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಭಾರತೀಯ ಜನತಾ ಪಕ್ಷ ಈಗಾಗಲೇ ಚುನಾವಣಾ ಸಿದ್ಧತೆಗೆ ಸಂಘಟನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೇಂದ್ರ ಬಿಜೆಪಿಯ ಟಾಪ್ ನಾಯಕರಲ್ಲಿ ಒಬ್ಬರಾದ ಬಿ.ಎಲ್ ಸಂತೋಷ್ ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸತನದ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದಲ್ಲಿ ಹೊಸತನಕ್ಕೆ ಆದ್ಯತೆ ಎಂಬ ವಿಚಾರ ರಾಜ್ಯ ಬಿಜೆಪಿಯಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಹಿರಿಯರು ಚಿಂತೆಗೆ ಬಿದ್ದಿದ್ದು, ಹೊಸಬರು ಯಾರು, ಯುವಕರು ಯಾರು ಎಂಬ ಪರಾಮರ್ಶೆ ಶುರುವಾಗಿದೆ. ಈ ವಿಚಾರಕ್ಕೆ ಕುರಿತಂತೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲೇ ಇದೆ. ಪ್ರತಿಯೊಬ್ಬ ಕಾರ್ಯಕರ್ತನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ. ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಹೊಸತನಗಳಿಗೆ ಅವಕಾಶವನ್ನೂ ಕೊಡುತ್ತಾರೆ. ಹೊಸತನಕ್ಕೆ ಅವಕಾಶ ನಿರಂತರವಾದ ಪ್ರಕ್ರಿಯೆ ಎಂದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಪ್ರಚಾರದ ಹುಚ್ಚು: ಸುನಿಲ್ ಕುಮಾರ್ ತಿರುಗೇಟು

ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಯಾರ ಹೇಳಿಕೆಗಳ ಮೂಲಕ ನಾವು ರೀಚಾರ್ಜ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರೀಚಾರ್ಜ್ ಆಗುತ್ತಾರೆ. ಹಳೇಬೇರು ಹೊಸಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆ ಇದೆಯಲ್ಲ ಹಾಗೆ ಬಿಜೆಪಿ ಇದೆ ಎನ್ನುತ್ತಾ, ಕಾಂಗ್ರೆಸ್ ಪಕ್ಷದ ಕಾಲೆಳೆದರು. ಇದನ್ನೂ ಓದಿ: ಅಮಿತ್ ಶಾರೊಂದಿಗೆ ಸಚಿವರಿಗೂ ಊಟಕ್ಕೆ ಆಹ್ವಾನ – ಕುತೂಹಲ ಮೂಡಿಸಿದ ಬೊಮ್ಮಾಯಿ ನಡೆ

Leave a Reply

Your email address will not be published.

Back to top button