ಬಳ್ಳಾರಿ: ಮಾಜಿ ಸಚಿವ, ಬಿಜೆಪಿ ಶಾಸಕ ಆನಂದಸಿಂಗ್ ಅನುಪಸ್ಥಿತಿಯಲ್ಲೇ ಹೊಸಪೇಟೆಯಲ್ಲಿ ಪರಿವರ್ತನಾ ಯಾತ್ರೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಪರಿವರ್ತನಾ ಯಾತ್ರೆಯಿಂದ ದೂರ ಉಳಿದಿರುವ ಶಾಸಕ ಆನಂದ್ ಸಿಂಗ್ ಮನವೊಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಇಂದು ಸಂಜೆ ಹೊಸಪೇಟೆಯಲ್ಲಿ ನಡೆಯಬೇಕಿರುವ ಪರಿವರ್ತನಾ ಯಾತ್ರೆ ಯಾವುದೇ ಕಾರಣಕ್ಕೂ ರದ್ದಾಗಬಾರದೆಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರಾವ್ ಸೂಚನೆ ನೀಡಿದ್ದು, ಸಕಲ ಸಿದ್ಧತೆ ನಡೆದಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿ ವಿರುದ್ಧದ ಬಂದ್ ಗೆ ಬಿಜೆಪಿ ಶಾಸಕನ ಬೆಂಬಲ!
Advertisement
Advertisement
ಆನಂದ್ ಸಿಂಗ್ ಬದಲಾಗಿ ಗಣಿ ಉದ್ಯಮಿ ಕಿಶೋರ್ ಪತ್ತಿಗೊಂಡಗೆ ಪರಿವರ್ತನಾ ಯಾತ್ರೆಯ ಉಸ್ತುವಾರಿ ನೀಡಲಾಗಿದೆ. ಕಿಶೋರ್ ಪತ್ತಿಗೊಂಡರಿಗೆ ಟಿಕೆಟ್ ನೀಡಲಾಗುತ್ತೆ ಅನ್ನೋ ಮಾತುಗಳು ಕೇಳಿ ಬರುತ್ತಿರುವುದರಿಂದ ಶಾಸಕ ಆನಂದ್ ಸಿಂಗ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದು, ಇಂದು ಪರಿವರ್ತನಾ ಯಾತ್ರೆಯಲ್ಲಿ ಗೈರಾಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ
Advertisement
ಆದ್ರೆ ಬಿಜೆಪಿ ಹೈಕಮಾಂಡ್ ಆನಂದ್ ಸಿಂಗ್ ಗೆ ಸೊಪ್ಪು ಹಾಕದೇ ಪತ್ತಿಗೊಂಡ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಸಲು ಮುಂದಾಗಿದೆ.