ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸೇರಿದಂತೆ ಶಾಸಕರು, ಸಂಸದರು ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.
ಇತ್ತ ಜಿಂದಾಲ್ ಡೀಲ್‍ಗೆ ಸಂಬಂಧಿಸಿದಂತೆ ಎಚ್‍ಕೆ ಪಾಟೀಲ್ ಅವರೇ ವಿರೋಧ ವ್ಯಕ್ತಪಡಿಸಿದ ಕಾರಣ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಜಿಂದಾಲ್‍ಗೆ ಭೂಮಿ ನೀಡ ಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಸಂಪುಟ ಉಪ ಸಮಿತಿ ರಚಿಸಲು ಕ್ಯಾಬಿನೆಟ್ ಸಭೆ ತೀರ್ಮಾನ ಕೈಗೊಂಡಿದೆ.
Advertisement
Advertisement
ಸರ್ಕಾರದ ಉಪ ಸಮತಿ ರಚನೆಯ ತೀರ್ಮಾನವನ್ನು ಬಿಎಸ್‍ವೈ ವಿರೋಧಿಸಿದ್ದಾರೆ. ಅಲ್ಲದೇ ಜಿಂದಾಲ್‍ನಿಂದ ಸರ್ಕಾರ ಕಿಕ್‍ಬ್ಯಾಕ್ ಪಡೆದಿದೆ ಎಂಬ ಆರೋಪವನ್ನು ಮತ್ತೊಮ್ಮೆ ಮಾಡಿದ್ದಾರೆ. ಸರ್ಕಾರದ ಪ್ರತಿಯೊಂದು ಕಾಮಗಾರಿಯಲ್ಲೂ ಲೂಟಿ ನಡೆಸುತ್ತಿದೆ ಎಂದು ಆಪಾದಿಸಿದ್ದಾರೆ. ಇತ್ತ ಬಿಜೆಪಿ ಪ್ರತಿಭಟನೆ ವೇಳೆ ಎಂಎಲ್‍ಸಿ ರವಿ ಕುಮಾರ್ ಅವರು, ಎಲ್ಲಿದ್ದೀಯಪ್ಪಾ ಸಿದ್ದರಾಮಯ್ಯ… ಎಲ್ಲಿದ್ದೀಯಪ್ಪಾ ತಾಜ್ ಹೊಟೇಲ್ ಮುಖ್ಯಮಂತ್ರಿ ಎಂದು ಕೂಗಿ ಕಾಲೆಳೆದಿದ್ದಾರೆ.
Advertisement
ಪ್ರತಿಭಟನೆ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ಸರ್ಕಾರ ಜಿಂದಾಲ್ ಡೀಲ್ ಅನ್ನು ಕ್ಯಾಬಿನೆಟ್ ಉಪ ಸಮಿತಿ ರಚನೆ ಮಾಡಿದೆ. ಆದರೆ ಕ್ಯಾಬಿನೇಟ್ ನಲ್ಲಿ ಇರುವ ಕಾಂಗ್ರೆಸ್ ನಾಯಕರೆ ಈ ಉಪ ಸಮಿತಿಯಲ್ಲೂ ಇರುತ್ತಾರೆ. ಸಚಿವ ಡಿಕೆ ಶಿವಕುಮಾರ್, ಜಾರ್ಜ್ ಅವರೇ ಸಮಿತಿಯಲ್ಲಿ ಇರುವುದರಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದಿದ್ದಾರೆ.