ಬೆಂಗಳೂರು: ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡೋದಕ್ಕೆ ಬಿಜೆಪಿ ಪ್ರಬಲವಾಗಿ ವಿರೋಧಿಸಿದೆ. ವಿಧಾನ ಪರಿಷತ್ ಕಲಾಪ ಪ್ರಾರಂಭವಾಗುತ್ತಲೇ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟ ಬಗ್ಗೆ ಪ್ರಸ್ತಾಪ ಮಾಡಿದರು.
ಸಂವಿಧಾನದಲ್ಲಿ ಧರ್ಮ ಆಧಾರಿತ ಗುತ್ತಿಗೆಗೆ ಅವಕಾಶ ಇಲ್ಲ. ಸರ್ಕಾರ ಗುತ್ತಿಗೆಯಲ್ಲಿ ಮೀಸಲಾತಿ ಕೊಡಲು ಮುಂದಾಗಿದೆ. ಇದಕ್ಕೆ ನಮ್ಮ ವಿರೋಧ ಇದೆ. ಗುತ್ತಿಗೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಛಲವಾದಿ ನಾರಾಯಣಸ್ವಾಮಿ ಮಾತಿಗೆ ಕಾಂಗ್ರೆಸ್ ಸದಸ್ಯ ಹರಿಪ್ರಸಾದ್, ಪಾಯಿಂಟ್ ಅರ್ಡರ್ ಎತ್ತಿ ವಿರೋಧ ವ್ಯಕ್ತಪಡಿಸಿದರು. ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಗೆ ಹಕ್ಕು ಇದೆ. ಅಲ್ಪಸಂಖ್ಯಾತರಿಗೆ ಹಕ್ಕು ಇದೆ. ಪೂರ್ವಾಗ್ರಹ ಪೀಡತವಾಗಿ ಕೆಲವರನ್ನ ದೂರ ಇಡೋದು ಸರಿಯಲ್ಲ. ಜನರು ತೆರಿಗೆ ಕಟ್ಟುವ ಹಣಕ್ಕೆ ದೇಶದ 140 ಕೋಟಿ ಜನರ ಪ್ರತಿಯೊಬ್ಬರಿಗೂ ಹಕ್ಕು ಇದೆ. ಯಾರ ಮೇಲೂ ದ್ವೇಷದ ಭಾವನೆಯಲ್ಲಿ ಮಾತಾಡೋದು ಸರಿಯಲ್ಲ. ಛಲವಾದಿ ನಾರಾಯಣಸ್ವಾಮಿ ಹೇಳಿದ ಮಾತು ಕಡತದಿಂದ ತೆಗೆಯಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಛಲವಾದಿ ನಾರಾಯಣಸ್ವಾಮಿ ವಿರೋಧ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರರಿಗೆ ಸೌಲಭ್ಯ ಕೊಡೋದ್ರಲ್ಲಿ ನಮ್ಮ ವಿರೋಧ ಇಲ್ಲ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡೋದು ಸರಿಯಲ್ಲ. ಇದಕ್ಕೆ ನಮ್ಮ ವಿರೋಧ ಇದೆ. ಧರ್ಮದ ಆಧಾರದಲ್ಲಿ ಮೀಸಲಾತಿಗೆ ನಮ್ಮ ವಿರೋಧ ಇದೆ ಎಂದರು.
ಸಿಟಿ ರವಿ ಮಾತನಾಡಿ, ಕೆ.ಎಂ.ಮುನ್ಷಿ ಹೇಳಿಕೆ ಪ್ರಸ್ತಾಪ ಮಾಡಿದರು. ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದು ಹೇಳಿದರು. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು ಅಂತ ಕಾನ್ಸ್ಟಿಟ್ಯೂಷನ್ ಅಸೆಂಬ್ಲಿಯಲ್ಲಿ ಮುನ್ಷಿ ಹೇಳಿದ್ರು. ಸುಪ್ರೀಂ ಕೋರ್ಟ್ ಕೂಡಾ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು ಅಂತ ಕೇಳಿತ್ತು ಅಂತ ಹರಿಪ್ರಸಾದ್‌ಗೆ ತಿರುಗೇಟು ಕೊಟ್ಟರು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತ-ವಿಪಕ್ಷಗಳ ನಡುವೆ ಗಲಾಟೆ ಶುರುವಾಯ್ತು. ಬಳಿಕ ಚರ್ಚೆಗೆ ನೋಟಿಸ್ ಕೊಡಿ, ಅವಕಾಶ ಕೊಡೋದಾಗಿ ಗಲಾಟೆಗೆ ಉಪ ಸಭಾಪತಿಗಳು ತೆರೆ ಎಳೆದರು.