ವಿಜಯಪುರ: ಬಿಜೆಪಿಯಿಂದ (BJP) ಯತ್ನಾಳ್ ಉಚ್ಚಾಟನೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದ ಬಿಜೆಪಿ ಪದಾಧಿಕಾರಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ವಿಜಯಪುರ (Vijayapura) ನಗರದ ರಂಭಾಪುರ ನಿವಾಸಿ, ಬಿಜೆಪಿ ನಗರದ ಮಂಡಲದ ಎಸ್‌ಟಿ ಮೋರ್ಚಾದ ಕಾರ್ಯದರ್ಶಿಯಾಗಿದ್ದ ಸಂತೋಷ ತಟಗಾರ ಮೃತ ದುರ್ದೈವಿ. ಡಿಪ್ರೆಷನ್‌ನಲ್ಲಿ ಕಾರನ್ನು ಮರಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ರಾಜ್ಯದ ಜನತೆಗೆ ಮತ್ತೊಂದು ಶಾಕ್ – ನಂದಿನಿ ಹಾಲಿನ ದರ 4 ರೂ. ಹೆಚ್ಚಳ
ಬುಧವಾರ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದ ಸುದ್ದಿಯನ್ನು ಕೇಳಿ ಸಂತೋಷ ಒತ್ತಡಕ್ಕೆ ಒಳಗಾಗಿದ್ದರು. ಬಳಿಕ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರಗೆ ಕರೆ ಮಾಡಿ ಉಚ್ಚಾಟನೆ ಬಗ್ಗೆ ಮನನೊಂದು ಮಾತನಾಡಿದ್ದರು. ಮುಂದೆ ಏನು ಮಾಡೋದು ಹೇಳಿ? ಮೊದಲು ನಾನು ರಾಜೀನಾಮೆ ಕೊಡುತ್ತೇನೆ. ಕೊನೆಗೆ ನಾನು ಏನು ಮಾಡುತ್ತೇನೆ ನೋಡಿ ಎಂದು ಹೇಳಿ ಸಂತೋಷ್ ಕಾಲ್ ಕಟ್ ಮಾಡಿದ್ದರು.
ಅದಾದ ಸ್ವಲ್ಪ ಹೊತ್ತಿನಲ್ಲಿ ಶಂಕರ್ ಅವರು ಸಂತೋಷ್ ಸಾವಿನ ಸುದ್ದಿ ಕೇಳಿದ್ದರು. ಸದ್ಯ ಸಂತೋಷ ಸಾವಿಗೆ ಬಿಜೆಪಿ ಹೈಕಮಾಂಡ್ (BJP High Command) ಕಾರಣ. ಹೈಕಮಾಂಡ್‌ನ ಉಚ್ಚಾಟನೆ ನಿರ್ಧಾರ ಬಿಜೆಪಿ (BJP) ಪದಾಧಿಕಾರಿಯ ಬಲಿ ಪಡೆದಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.ಇದನ್ನೂ ಓದಿ: ನನ್ನ ಜಾತ್ರೆ ನಿಲ್ಸಿದ್ದೀರಿ.. ಮೂರು ದಿನಗಳಲ್ಲಿ ಮೂರು ಹೆಣ ಬೀಳುತ್ತೆ – ಮೈಮೇಲೆ ದೇವರು ಬಂದಿದೆ ಅಂತೇಳಿ ಮಹಿಳೆ ಶಾಪ!