ಉಪಚುನಾವಣೆಯ 3 ಕ್ಷೇತ್ರಗಳ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳು ಗೆಲ್ತಾರೆ – ವಿಜಯೇಂದ್ರ ಭವಿಷ್ಯ

Public TV
1 Min Read
BY Vijayendra

ಬೆಂಗಳೂರು: 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ (BJP) ಮತ್ತು ಎನ್‌ಡಿಎ (NDA) ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra)  ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಹೇಗಿದೆ ಎಂದು ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ನವರು ಗೆದ್ದಾಗಿದೆ ಎನ್ನುವ ಭ್ರಮೆಯಲ್ಲಿ ಇದ್ದರು. ಆದರೆ ಈಗ ಎನ್‌ಡಿಎ ಅಭ್ಯರ್ಥಿ ಗೆಲುತ್ತಾರೆ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅದರ ಫಲಿತಾಂಶ ನ.23ಕ್ಕೆ ಗೊತ್ತಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್

ಸಂಡೂರು (Sanduru) ನಮ್ಮ ಪರವಾಗಿ ಇದೆ. ಐತಿಹಾಸಿಕ ಗೆಲುವು ಆಗುವ ವಿಶ್ವಾಸ ಇದೆ. ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ (Bharat Bommai) ಅವರು ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ. 3 ಕ್ಷೇತ್ರಗಳಲ್ಲಿ ಬಿಜೆಪಿ, ಎನ್‌ಡಿಎ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಯಾಗಲಿದೆ ಎಂದರು.

ಚನ್ನಪಟ್ಟಣದಲ್ಲಿ (Channapatna) ಯೋಗೇಶ್ವರ್‌ರಿಂದ (CP Yogeshwar) ಹತಾಶೆ ಮಾತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಡಪ್ಪ ಯಾರು ಏನು ಹೇಳಿಕೆ ಕೊಡಬೇಕೋ ಅದನ್ನು ಕೊಡುತ್ತಿದ್ದಾರೆ. ಜನರು ತಮ್ಮ ತೀರ್ಪು ನೀಡಿದ್ದಾರೆ 23ಕ್ಕೆ ಫಲಿತಾಂಶ ಬರುತ್ತದೆ ಅಲ್ಲಿಯವರೆಗೂ ಕಾಯೋಣ ಎಂದು ತಿಳಿಸಿದರು.ಇದನ್ನೂ ಓದಿ: ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

Share This Article