ChikkamagaluruDistrictsKarnatakaLatestLeading NewsMain PostMysuru

ನಾನೂ ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅನ್ನಬಹುದಲ್ವಾ?: ಸಿಟಿ ರವಿ

ಚಿಕ್ಕಮಗಳೂರು: ಮೈಸೂರು (Mysuru) ಭಾಗದಲ್ಲಿ ಸಿದ್ದರಾಮಯ್ಯರನ್ನ (Siddaramaiah) ಕಚ್ಚೆ ಹರುಕ ಅನ್ನುತ್ತಾರೆ. ನಾನೂ ಹೇಳಬಹುದಲ್ವಾ ಎಂದು ಸಿದ್ದುಗೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ತಿರುಗೇಟು ನೀಡಿದ್ದಾರೆ.

ಚಿಕ್ಕಮಂಗಳೂರು (Chikkamagaluru) ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್‌ಗಂಡಿ ಬಳಿ ಮಾತನಾಡಿದ ಅವರು, `ಸಿ.ಟಿ.ರವಿ ಲೂಟಿ ರವಿ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಜನ ಸಿದ್ದರಾಮಯ್ಯನರನ್ನ ಕಚ್ಚೆ ಹರಕ ಅನ್ನುತ್ತಾರೆ. ಈ ಮಾತು ನನ್ನದ್ದಲ್ಲ, ಮೈಸೂರಿನ ಜನರದ್ದು. ಮೈಸೂರಿನ ಜನ ಹೀಗೆ ಮಾತನಾಡುತ್ತಾರೆ ಎಂದು ನಾನು ಆ ರೀತಿ ಹೇಳಬಹುದಲ್ವಾ? ನಾನು ಆ ರೀತಿ ಹೇಳಿದರೆ ಮರ್ಯಾದೆ ಹೋಗುವುದು ಅವರದ್ದೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ

ಸಿದ್ದರಾಮಯ್ಯ ಶಾಸಕರಾಗಿದ್ದಾಗ, ಆಗದೇ ಇದ್ದಾಗ ಹೇಗಿದ್ರು ಅಂತ ಬಿಚ್ಚಿಡಲು ನನಗೂ ಬರುತ್ತೆ. ನನ್ನದಲ್ಲ, ಜನ ಮಾತನಾಡುತ್ತಾರೆ ಅಂದರೆ ಅವರ ಬಾಯಲ್ಲಿ ಬಂದಾಗ ಅದು ಅವರ ಮಾತಾಗುತ್ತೆ. ಸಿ.ಟಿ.ರವಿ ಬಾಯಲ್ಲಿ ಬಂದಾಗ ಸಿ.ಟಿ.ರವಿ ಮಾತಾಗುತ್ತೆ ಎಂದು ಕುಟುಕಿದ್ದಾರೆ.

`ಸಿ.ಟಿ.ರವಿ ಅಲ್ಲ, ಲೂಟಿ ರವಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೆ ದಾಖಲೆ ಬೇಕು. ಜನ ನನ್ನನ್ನ 4 ಬಾರಿ ಪ್ರೀತಿಯಿಂದ ಚುನಾವಣೆಯಿಂದ ಚುನಾವಣೆಗೆ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲಿಸಿದ್ದಾರೆ. ಜವಾಬ್ದಾರಿಯಲ್ಲಿ ಇರುವ ವ್ಯಕ್ತಿ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೆರೆ ಮಧ್ಯ ತೆಪ್ಪದಲ್ಲಿ ತೆರಳಿ ಬೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ದುರಸ್ತಿ – ಎಲ್ಲೆಡೆ ಮೆಚ್ಚುಗೆ

ಸಿದ್ದರಾಮಯ್ಯ ಮುಖಕ್ಕೆ ಮಸಿ ಬಳಿದಂತಾಗುತ್ತದೆ: ಚಿಕ್ಕಮಗಳೂರಿಗೆ ಬಂದು ಯಾರನ್ನಾದರೂ ಕೇಳಿ. ಯಾರ ಮನೆ ಲೂಟಿ ಮಾಡಿದ್ದೇನೆ? ಅಧಿಕಾರಿಗಳನ್ನ ಕೇಳಿ ಹಣ ಪಡೆದು ವರ್ಗಾವಣೆ ಮಾಡಿದ್ದೇನಾ? ಅವರ ಎಲ್ಲಾ ಹೇಳಿಕೆಗೆ ಕೌಂಟರ್ ಕೊಡಬೇಕು ಅನ್ನೋದು ನನ್ನ ಉದ್ದೇಶವಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ತಮ್ಮ ಸ್ಥಾನಕ್ಕೆ ತಕ್ಕನಾಗಿ ಮಾತನಾಡಬೇಕು ಎಂದು ಜನ ಹೇಳ್ತಾರೆ ಅಂತ ಏನೇನೆಲ್ಲಾ ಹೇಳೋದಲ್ಲ. ಸದ್ಯ ನಾನು ಅವರ ಬಗ್ಗೆ ಸ್ಯಾಂಪಲ್‌ಗೆ ಒಂದು ಮಾತನ್ನು ಮಾತ್ರ ಹೇಳಿದ್ದೇನೆ. ಎಲ್ಲವನ್ನೂ ಹೇಳಿದರೆ ಎತ್ತರದ ಸ್ಥಾನದಲ್ಲಿರುವ ಅವರ ಮುಖಕ್ಕೂ ಮಸಿ ಬಳಿದಂತಾಗುತ್ತೆ ಅನ್ನೋದು ಗೊತ್ತಿರಲಿ ಎಂದು ಎಚ್ಚರಿಸಿದ್ದಾರೆ.

Live Tv

Leave a Reply

Your email address will not be published.

Back to top button