ಬೆಂಗಳೂರು: ಬಿಜೆಪಿಯಲ್ಲಿ (BJP) ಬಣ ಫೈಟ್ ತಾರಕಕ್ಕೇರಿರುವ ಹೊತ್ತಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ (Tarun Chugh) ರಾಜ್ಯಕ್ಕೆ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ ರಾಜ್ಯಕ್ಕೆ ತರುಣ್ ಚುಗು ಅವರು ಆಗಮಿಸಿದರು. ಬಿಜೆಪಿ ಕಚೇರಿಗೆ ಬಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದ – ಬೀದರ್‌ನ ಮಹಾಮಠದ ಬಸವಗಿರಿ ಮೇಲೆ ವಕ್ಫ್ ಕರಿಛಾಯೆ
ವಿಜಯೇಂದ್ರ ಬಣದಿಂದ ಒಗ್ಗಟ್ಟಾಗಿ ನಿಂತು ಸ್ವಾಗತ ಕೋರಲಾಯಿತು. ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಪಕ್ಷದ ಕಚೇರಿಗೆ ರಾಷ್ಟ್ರೀಯ ನಾಯಕ ಆಗಮಿಸಿದರು.
ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಮೊದಲಿಗೆ ಸಂಘಟನಾ ಪರ್ವ ಸಂಬಂಧ 30 ಪ್ರಮುಖರ ಜತೆ ಸಭೆ ಇದೆ. ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾ ಅಧ್ಯಕ್ಷರು, ಮಂಡಲ, ಬೂತ್ ಸಮಿತಿಗಳ ಪ್ರಮುಖರು ಭಾಗಿಯಾಗಿದ್ದಾರೆ. ವಿಜಯೇಂದ್ರ, ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ್, ಸುನೀಲ್ ಕುಮಾರ್, ರಾಜ್ಯ ಪದಾಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ – ಇಂದು ‘ಲೋಕಾ’ ವಿಚಾರಣೆಗೆ ಹಾಜರಾಗ್ತಾರಾ ಜಮೀರ್?
ಇಂದು ಇಡೀ ದಿನ ಬಿಜೆಪಿ ಕಚೇರಿಯಲ್ಲಿ ಸರಣಿ ಸಭೆಗಳು ನಿಗದಿಯಾಗಿವೆ. ಪಕ್ಷದ ವಿದ್ಯಮಾನಗಳ ಬಗ್ಗೆ ಪ್ರಮುಖ ಬಿಜೆಪಿ ನಾಯಕರ ಜೊತೆ ರಾಷ್ಟ್ರೀಯ ನಾಯಕರು ಸಮಾಲೋಚನೆ ನಡೆಸಲಿದ್ದಾರೆ. ಶಾಸಕರ ಸಭೆ, ಪ್ರಮುಖರ ಸಭೆ, ಹಿರಿಯರ ಜೊತೆ ವಿಶೇಷ ಸಭೆಗಳು ನಡೆಯಲಿವೆ. ಸದಸ್ಯತ್ವದ ಅಭಿಯಾನ, ಪಕ್ಷದೊಳಗಿನ ಆಂತರಿಕ ಸಂಘರ್ಷದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ವಿದ್ಯಮಾನಗಳ ಕುರಿತು ರಿಪೋರ್ಟ್ ಸಲ್ಲಿಸಲಿದ್ದಾರೆ.