ಚಿಕ್ಕಮಗಳೂರು/ಪಣಜಿ: ಬರೀ ಡಿಕೆಶಿ ಮಾತ್ರವಲ್ಲ, ಕೆದಕಿದರೆ ಇಡೀ ಕಾಂಗ್ರೆಸ್ ಪೂರ್ತಿ ಹೊಲಸೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸಲೀಂ-ಉಗ್ರಪ್ಪ ಅವರು ಡಿಕೆಶಿ ಬಗ್ಗೆ ನಡೆಸಿದ ಮಾತುಕತೆ ಸಂಬಂಧ ಗೋವಾದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸೇ ಹೀಗಿದೆ, ತಿಪ್ಪೆ ಕೆದಕಿದಷ್ಟು ಹೊಲಸೇ ಹೊರಬರಲಿದೆ. ಬರೀ ಡಿಕೆಶಿ ಅಲ್ಲ, ಕೆದಿಕಿದರೆ ಇಡೀ ಕಾಂಗ್ರೆಸ್ ಪೂರ ಹೊಲಸೆ. ಸಲೀಂ-ಉಗ್ರಪ್ಪ ಸದಾ ಬೇರೆ ಪಕ್ಷದ ಬಗ್ಗೆ ಟೀಕೆ ಮಾಡುತ್ತಿದ್ದರು. ಇಂದು ಅವರೇ ಅವರ ಪಕ್ಷದ ಗುಟ್ಟು ರಟ್ಟು ಮಾಡಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ
ಕಳ್ಳನ ಹೆಂಡತಿ ಯಾವತ್ತಿದ್ರೂ ಡ್ಯಾಶ್…ಡ್ಯಾಶ್…ಡ್ಯಾಶ್. ಕಾಂಗ್ರೆಸ್ ನಾಯಕರ ಬಗ್ಗೆ ಅವರೇ ಗುಟ್ಟನ್ನ ರಟ್ಟು ಮಾಡಿದ್ದಾರೆ. ಪರಮೇಶ್ವರನ್ನ ಯಾವ ಶಕ್ತಿ ಸೋಲಿಸಿತ್ತೋ ಅದೇ ಶಕ್ತಿಯಿಂದ ನನಗೆ ಅಡ್ಡವಾಗಬಹುದೆಂದು ಗುಟ್ಟು ರಟ್ಟಾಗಿದೆ. ಡಿಕೆಶಿ ನನಗೆ ಅಡ್ಡ ಎಂದು ಅವರ ಬದಿಗೊಳಿಸಬೇಕೆಂಬ ಸಂಚು ಸ್ಪಷ್ಟವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ
ಸಲೀಂ-ಉಗ್ರಪ್ಪ ಅಷ್ಟು ದಡ್ಡರು ಎಂದು ನನಗೆ ಅನ್ನಿಸಲ್ಲ. ಗುಟ್ಟು ರಟ್ಟಾಗಲಿ ಎಂದೇ ರಟ್ಟು ಮಾಡಿದ್ದಾರೆ ಅನಿಸುತ್ತಿದೆ. ಇದರ ಹಿಂದೆ ಖಂಡಿತ ವಿಪಕ್ಷ ನಾಯಕರ ಬುದ್ದಿವಂತ ಮೆದುಳು ಕೆಲಸ ಮಾಡಿದೆ ಎಂದು ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು