ನವದೆಹಲಿ: ಸುದೀರ್ಘ ಅವಧಿಗೆ ಸಿಎಂ ಆಗಿದ್ದೀರಿ, ಪಿಎಂ ಆಗಿದ್ದೀರಿ ಈಗ ಆರಾಮಾಗಿರಿ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದರು. ಇದು ಅವರ ಹಳೆ ರಾಜನೀತಿಯ ಅನುಭವಾಗಿದೆ. ಆದರೆ ನಾವು ರಾಜನೀತಿ ಮಾಡಲು ಬಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ರಾಷ್ಟ್ರೀಯ ಮಹಾ ಅಧಿವೇಶದಲ್ಲಿ ಮಾತನಾಡಿದ ಮೋದಿ, ಸುದೀರ್ಘ ಅವಧಿಗೆ ಸಿಎಂ ಆಗಿದ್ದೀರಿ, ಪಿಎಂ ಆಗಿದ್ದೀರಿ. ಈಗ ಆರಾಮ ಮಾಡಿ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದರು. ಇದು ಅವರ ಹಳೆ ರಾಜನೀತಿಯ ಅನುಭವಾಗಿದೆ. ಆದರೆ ನಾವು ರಾಜನೀತಿ ಮಾಡಲು ಬಂದಿಲ್ಲ. ರಾಷ್ಟ್ರನೀತಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?
Advertisement
Advertisement
ನಮ್ಮ ಕಾರ್ಯಕರ್ತರು ವರ್ಷದ ಪ್ರತಿ ದಿನ 24 ಗಂಟೆ ದೇಶಕ್ಕಾಗಿ ಏನಾದ್ರು ಯೋಚನೆ ಮಾಡುತ್ತಿರುತ್ತಾರೆ. ಹೊಸ ಉತ್ಸಾಹ, ಹುಮ್ಮಿಸಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. 18 ನೇ ಲೋಕಸಭೆ ಚುನಾವಣೆಗೂ ಕೆಲಸ ಆರಂಭಿಸಿದ್ದಾರೆ. ಮುಂದಿನ 100 ದಿನ ಎಚ್ಚರಿಕೆಯಿಂದ ಇರಬೇಕು. ದೇಶದ ಪ್ರತಿ ಜನರನ್ನು ನಾವು ತಲುಪಬೇಕು. ಎಲ್ಲರ ವಿಶ್ವಾಸ ಸಂಪಾದಿಸಬೇಕು. ಎಲ್ಲರ ವಿಶ್ವಾಸ ದೇಶದ ಸೇವೆಗಾಗಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಕಳೆದ ಎರಡು ದಿನದಲ್ಲಿ ನಡೆದ ಚರ್ಚೆ ದೇಶದ ಭವಿಷ್ಯ ಉಜ್ವಲಗೊಳಿಸಲಿದೆ. ಮುಂದಿನ 100 ದಿನಗಳಲ್ಲಿ, ನಾವೆಲ್ಲರೂ ಪ್ರತಿ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕು. ನಾವು ಎಲ್ಲರ ವಿಶ್ವಾಸವನ್ನು ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
Advertisement
ಭಾರತವನ್ನು ವಿಕಾಸ ಮಾಡುವುದು ನಮ್ಮ ಸಂಕಲ್ಪ. ಮುಂದಿನ ಐದು ವರ್ಷದಲ್ಲಿ ಭಾರತ ಮೊದಲಗಿಂತ ಹೆಚ್ಚು ಕೆಲಸ ಮಾಡಬೇಕು. ವಿಕಸಿತ ಭಾರತದತ್ತ ಕೆಲಸ ಮಾಡಬೇಕು. ಇದಕ್ಕೆ ಬಿಜೆಪಿ ಅದ್ಭುತವಾಗಿ ಮರಳಬೇಕಿದೆ. ಇಂದು ವಿಪಕ್ಷ ನಾಯಕರು ಎನ್‌ಡಿಎ 400 ಸ್ಥಾನಗಳ ಘೋಷಣೆ ಕೂಗುತ್ತಿದ್ದಾರೆ. ಬಿಜೆಪಿ 370 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಏನ್ ಮಾಡಬೇಕಿತ್ತು ಮಾಡಿದ್ದೀರಿ, ಈಗ್ಯಾಕೆ ಅವಸರ ಮಾಡುತ್ತೀರಿ ಎಂದು ಬಹಳ ಜನ ಕೇಳುತ್ತಾರೆ. 25 ಕೋಟಿ ಜನರನ್ನು ಬಡತನದಿಂದ ಹೊರ ತರವುದು ಸುಮ್ನೆ ಆಗಿರಲಿಲ್ಲ. ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯಿಂದ ಮುಕ್ತಿ ಮಾಡಿದೆ. ಬಡವರು ಮಧ್ಯಮ ವರ್ಗದವರ ಜೀವನ ಸುಧಾರಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಸಂಪತ್ತು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ; ಸಿದ್ದರಾಮಯ್ಯಗೆ ಮಹಾ ಅಧಿವೇಶನದಲ್ಲಿ ಅಮಿತ್ ಶಾ ತಿರುಗೇಟು
Advertisement
ಛತ್ರಪತಿ ಶಿವಾಜಿ ಮಹರಾಜ್ ಅವರನ್ನು ನಂಬುವ ಜನ ನಾವು. ಅವರು ಛತ್ರಪತಿ ಆದ್ಮೇಲೆ ಸುಮ್ನೆ ಕೂರಲಿಲ್ಲ. ಅವರು ಮಿಷನ್ ಕಾರ್ಯಪ್ರವೃತ್ತವಾಗಿದ್ದರು. ಅದೇ ಮಾದರಿಯಲ್ಲಿ ಸುಖ ವೈಭವದಲ್ಲಿ ಜೀವಿಸುವ ವ್ಯಕ್ತಿ ನಾನಲ್ಲ. ನಾನು ರಾಷ್ಟ್ರ ಸಂಕಲ್ಪದೊಂದಿಗೆ ಹೊರಟ ವ್ಯಕ್ತಿ. ನನ್ನ ಮನೆ ಬಗ್ಗೆ ಚಿಂತೆ ಮಾಡಿದ್ದರೆ ಕೋಟ್ಯಂತರ ಬಡವರಿಗೆ ಮನೆ ನಿರ್ಮಾಣವಾಗುತ್ತಿರಲಿಲ್ಲ. ಕೋಟ್ಯಂತರ ಮಕ್ಕಳ ಭವಿಷ್ಯಕ್ಕಾಗಿ ನಾನು ಬದುಕುತ್ತೇನೆ ಅದಕ್ಕಾಗಿ ಯೋಚಿಸುತ್ತೇನೆ. ಕೋಟ್ಯಂತರ ಸಹೋದರಿಯರ ಕನಸೇ ಮೋದಿ ಸಂಕಲ್ಪವಾಗಿದೆ. ಈ ಸಂಕಲ್ಪ ಪೂರ್ಣ ಮಾಡಲು ನಾವು ಸೇವಾ ಭಾವನೆಯಿಂದ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ನಾವು ದೇಶಕ್ಕಾಗಿ, ಕೋಟ್ಯಂತರ ಜನರಿಗಾಗಿ, ಜನರ ಜೀವನ ಬದಲಿಸಲು ಇನ್ನೂ ಹೆಚ್ಚು ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಯುವಶಕ್ತಿ, ನಾರಿಶಕ್ತಿ, ಬಡವ ರೈತರ ಶಕ್ತಿಯನ್ನು ವಿಕಸಿತ ಭಾರತದ ನಿರ್ಮಾಣ ಶಕ್ತಿ ಮಾಡಿದ್ದೇವೆ. ಸರ್ಕಾರ ಬದಲಾಗುತ್ತದೆ, ವ್ಯವಸ್ಥೆ ಬದಲಾಗಲ್ಲ ಎಂದು ಮೊದಲು ಹೇಳುತ್ತಿದ್ದರು. ಆದರೆ ನಾವು ವ್ಯವಸ್ಥೆಯ ಹಳೆ ಯೋಚನೆ, ಚಿಂತನೆಯನ್ನು ಬದಲಿಸಿದ್ದೇವೆ. ಆದಿವಾಸಿ, ಹಿಂದುಳಿದ ಜನರಿಗಾಗಿ ಯೋಜನೆ ಮಾಡಿದ್ದೇವೆ. ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳನ್ನು ನಿವಾರಿಸಿದ್ದೇವೆ. ದೇಶದ ಮಹಿಳೆಯರ ಬಗ್ಗೆ ಕೆಂಪುಕೋಟೆಯಲ್ಲಿ ಮಾತನಾಡಿದ ಮೊದಲ ಪ್ರಧಾನಿ. ಮಹಿಳೆಯರಿಗಾಗಿ ಮನೆ, ಉಚಿತ ಗ್ಯಾಸ್ ನೀಡಿದೆ. ಮಹಿಳೆಯರ ಸಮಸ್ಯೆ ಬಗೆಹರಿಸಲು ಪ್ರತಿ ಮನೆಗೆ ಕುಡಿಯುವ ನೀರು ನೀಡಿದ್ದೇವೆ. ಬ್ಯಾಂಕ್ ಖಾತೆ ತೆರೆದು, ಮುದ್ರಾ ಯೋಜನೆ ಮೂಲಕ ಲೋನ್ ನೀಡಿದ್ದೇವೆ. ಲಕ್ಷಪತಿ ಸಹೋದರಿ ಮಾಡಿದ್ದೇವೆ, ಮಾತೃತ್ವ ರಜೆ ವಿಸ್ತರಣೆ ಮಾಡಿದ್ದೇವೆ. ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನಮ್ಮ ಸರ್ಕಾರ ನೀಡಿದೆ. ತ್ರಿವಳಿ ತಲಾಕ್ ವಿರುದ್ಧ ಕಾನೂನು ಮಾಡಿದೆವು ಎಂದು ಕೇಂದ್ರ ಸರ್ಕಾರ ಮಹಿಳೆಯರಿಗೆ ನೀಡಿದ ಕೊಡುಗಳನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ನಿಧನ- ಪ್ರಧಾನಿ ಸಂತಾಪ
ಹೊಸ ಸಂಸತ್ ಭವನ ನಿರ್ಮಾಣ ಮಾಡಿದ್ದೇವೆ. ನ್ಯಾಷನಲ್ ವಾರ್ ಮೆಮೊರಿಯಲ್, ಪೊಲೀಸ್ ಸ್ಮಾರಕ್ ನಿರ್ಮಾಣ ಮಾಡಿದೆವು. ಅಭಿವೃದ್ಧಿ ಹೊಂದಿದ ಭಾರತ ನಮ್ಮ ಗುರಿ. ನಮ್ಮ ಮೂರನೇ ಅವಧಿಗೆ ದೇಶದ ಆರ್ಥಿಕತೆ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಭರವಸೆ ನೀಡಿದ್ದೇನೆ. ಇದು ಮೋದಿ ಗ್ಯಾರಂಟಿ. ಮೂರನೇ ಬಲಿಷ್ಠ ಆರ್ಥಿಕತೆಗಾಗಿ ನಾವು ಎಷ್ಟು ವೇಗವಾಗಿ ಕೆಲಸ ಮಾಡಬೇಕು ಅರ್ಥ ಮಾಡಿಕೊಳ್ಳಬೇಕು. ಭಾರತ ಒಂದು ಟ್ರಿಲಿಯನ್ ಆರ್ಥಿಕತೆಯಾಗಲು 60 ವರ್ಷ ಬೇಕಾಯಿತು. ಆದರೆ ಹತ್ತು ವರ್ಷದಲ್ಲಿ ನಾವು ನಾಲ್ಕು ಟ್ರಿಲಿಯನ್ ಆರ್ಥಿಕತೆಯಾಗಿ ಮಾಡಿದ್ದೇವೆ. ಮೂರನೇ ಆರ್ಥಿಕತೆಯಾಗುವುದು ಅಂದ್ರೆ ಭಾರತದ ಅತಿದೊಡ್ಡ ಅಭಿವೃದ್ಧಿ. ಹೊಸ ತಂತ್ರಜ್ಞಾನದೊಂದಿಗೆ ದೇಶ ಮುಂದುವರಿಯುವುದು ಎಂದು ಭರವಸೆಯ ನುಡಿಗಳನ್ನಾಡಿದ್ದಾರೆ.