ಬೆಂಗಳೂರು: ರಾಜ್ಯ ಬಿಜೆಪಿ ಮೇಲೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ. ಗುರುವಾರ ಸಂಜೆ 4.30ರ ಸುಮಾರಿಗೆ ಸಾಮಾಜಿಕ ಜಾಲತಾಣದ ತಂಡದ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯದಿಂದ ಭಾಗಿಯಾಗಿದ್ದ ಕೆ ಎಸ್ ಈಶ್ವರಪ್ಪ, ಸಿಟಿ ರವಿ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
ಶಾ ಹೇಳಿದ್ದು ಏನು?
ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ತಯಾರಿ ಸರಿಯಾದ ದಿಕ್ಕಿನತ್ತ ಸಾಗದ್ದಕ್ಕೆ ಶಾ ಗರಂ ಆದ್ರು. ಈ ವೇಳೆ ಅರುಣ್ ಕುಮಾರ್ ಅವರು ಒಂದು ಲಕ್ಷ ಬೈಕ್ ರ‍್ಯಾಲಿಗೆ ತಯಾರಿ ಮಾಡಿದ್ದೇವೆ ಅಂದ್ರು. ಅರುಣ್ ಕುಮಾರ್ ಮಾತಿನಿಂದ ಸಿಟ್ಟಾದ ಅಮಿತ್ ಶಾ, ಕರ್ನಾಟಕದಲ್ಲಿ ಕೇವಲ ಒಂದು ಲಕ್ಷ ಜನರ ಬೈಕ್ ರ‍್ಯಾಲಿನಾ ಎಂದು ಪ್ರಶ್ನೆ ಮಾಡಿದ್ರು.
Advertisement
ನೀವೆಲ್ಲಾ ಏನ್ ಮಾಡ್ತಾ ಇದ್ದೀರಿ. ಸೀರಿಯಸ್ ನೆಸ್ ಇಲ್ಲವೇನು ನಿಮಗೆ ಎಂದು ಕಿಡಿಕಾರಿದ್ರು. ಬಳಿಕ ನಾನು ಮತ್ತೆ ವಿಡಿಯೋ ಸಂಭಾಷಣೆ ನಡೆಸುತ್ತೇನೆ. ಅಲ್ಲಿ ತನಕ ಅಂಗಡಿ ಬಾಗಿಲು ಮುಚ್ಚಬೇಡಿ ಎಂದು ವಿಡಂಭನಾತ್ಮಕವಾಗಿ ರಾಜ್ಯ ನಾಯಕರನ್ನು ಕುಟುಕಿದ್ರು. ಅಲ್ಲಿಯವರೆಗೆ ಹಾಗೆ ಕುಳಿತಿರಿ ಎಂದು ಹೇಳಿ ಸುಮಾರು ಮುಕ್ಕಾಲು ಗಂಟೆ ರಾಜ್ಯ ನಾಯಕರನ್ನು ಕೂರಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
Advertisement
Advertisement
ಬೇರೆಲ್ಲಾ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಚುನಾವಣೆಗೆ ನಿಮ್ಮ ತಯಾರಿ ಏನೂ ಇಲ್ಲ ಎಂದು ಅರುಣ್ ಕುಮಾರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಈಶ್ವರಪ್ಪ, ಸಿ.ಟಿ.ರವಿ ಸುಮ್ಮನೆ ಕುಳಿತಿದ್ದರು. ಇವರನ್ನ ನೋಡಿದ ಅಮಿತ್ ಶಾ, ಓಹೋ ಈಶ್ವರಪ್ಪ ಇದ್ದಾರ ಎಂದು ಉದ್ಗಾರ ಮಾಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv