ನವದೆಹಲಿ: ಸಿ.ಟಿ.ರವಿ (C.T.Raiv) ಶಿಸ್ತು ಬದ್ಧವಾಗಿ ಸಂಘಟನೆಯಿಂದ ಬಂದ ವ್ಯಕ್ತಿ, ವಿಚಾರದಲ್ಲಿ ಸ್ಪಷ್ಟತೆ ಇರುವ ವ್ಯಕ್ತಿ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಸಭ್ಯ ಹೇಳಿಕೆ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಹೇಳಿದ್ದಾರೋ ಇಲ್ಲವೋ ತನಿಖೆ ಆಗಲಿ. ದೂರಿನ ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ಆಗಬೇಕಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ (Jagadish Sheeter) ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಅವರನ್ನು ತಕ್ಷಣವೇ ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ. ಅವರಿಗೆ ಮಾಸಿಕವಾಗಿ, ದೈಹಿಕವಾಗಿ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಅವರ ಮೇಕೆ ದಾಳಿ ಮಾಡಿದವರನ್ನು ಬಂಧಿಸಿಲ್ಲ. ಎರಡು ಕಡೆಗೂ ಸಮಾನ ನ್ಯಾಯ ಇರಬೇಕಿತ್ತು. ಆದರೆ, ಸಿಟಿ ರವಿ ಮೇಲೆ ಸರ್ಕಾರದ ದೌರ್ಜ್ಯವನ್ನು ಖಂಡಿಸುತ್ತೇನೆ ಎಂದರು. ಇದನ್ನೂ ಓದಿ: ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವ್ದೇ ನಿರ್ಧಾರಕ್ಕೆ ಬರೋದು ತಪ್ಪು: ಬೊಮ್ಮಾಯಿ
Advertisement
Advertisement
ಸಂಸದ ಗೋವಿಂದ ಕಾರಜೋಳ ಮಾತನಾಡಿ, ರಾಜಕಾರಣಿಗಳು ಯಾರೇ ಇರಲಿ, ಯಾವುದೇ ಪಕ್ಷದವರು ಆಗಿರಲಿ 140 ಕೋಟಿ ಜನರಿಗೆ ಮಾದರಿಯಾಗಿರಬೇಕು. ಅಕಸ್ಮಾತ್ ಸಿ.ಟಿ.ರವಿ ಅವರು ಆ ಪದ ಬಳಸಿದ್ದರೆ ತನಿಖೆ ಆಗಬೇಕು. ಆದರೆ, ಅವರನ್ನು ಸರ್ಕಾರ ನಡೆಸಿಕೊಂಡಿರುವ ರೀತಿ ಖಂಡನೀಯ. ತರಾತುರಿಯಲ್ಲಿ ಬಂಧಿಸಿ, ದೇಶದ್ರೋಹಿ ರೀತಿಯಲ್ಲಿ ಬೇರೆ ಬೇರೆ ಕಡೆಗೆ ಸುತ್ತಾಡಿಸಿದ್ದು ತಪ್ಪು. ರವಿ ಅವರ ಜೊತೆ ವಕೀಲರು ಮಾತನಾಡಲು ಅವಕಾಶ ಕೊಟ್ಟಿಲ್ಲ. ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ನಡೆಯುತ್ತಿದೆಯೋ ಅಥವಾ ಚಂಬಲ್ ಕಣಿವೆ ಗೂಂಡಾಗಳ ರೀತಿ ಆಡಳಿತ ನಡೆಯುತ್ತಿದೆಯೋ? ಎನ್ನುವುದು ಅರ್ಥವಾಗುತ್ತಿಲ್ಲ ಎಂದರು.
Advertisement
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ದ್ವೇಷದ ರಾಜಕೀಯ ಮಾಡುತ್ತಿದೆ ಎನ್ನುವುದು ಅವರ ನಡವಳಿಕೆಯಿಂದ ಸ್ಪಷ್ಟವಾಗಿ ಕಾಣಿಸುತ್ತೆ. ಹಿಂದೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಐಪಿಎಸ್ ಅಧಿಕಾರಿ ಬಿಡಲಾಗಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿತು. ಇದನ್ನೂ ಓದಿ: ಬೆಳಗಾವಿ ಕೋರ್ಟ್ ಹಾಲ್‌ನಲ್ಲಿ ಕಣ್ಣೀರಿಟ್ಟ ಸಿ.ಟಿ ರವಿ – ಜಾಮೀನಿಗೆ ವಕೀಲರ ಮನವಿ, ಆದೇಶ ಕಾಯ್ದಿರಿಸಿದ ಕೊರ್ಟ್
Advertisement
ಸಿಟಿ ರವಿ ಅವರದು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಇದನ್ನು ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಆದರೆ ಜನಪ್ರತಿನಿಧಿಯನ್ನು ರಾತ್ರಿಯಲ್ಲ ಓಡಾಡಿಸಿದ್ದಾರೆ. ಜನಪ್ರತಿನಿಧಿಗಳ ಹೋರಾಟ ಹತ್ತಿಕ್ಕಲಾಗುತ್ತಿದೆ. ಸಂಸತ್‌ನಲ್ಲಿ ರಾಹುಲ್ ಗಾಂಧಿ ಬಿಜೆಪಿ ಸಂಸದರ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇಲ್ಲದೆ ಕಾಂಗ್ರೆಸ್ ಹೀಗೆ ವರ್ತಿಸುತ್ತಿದೆ. ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಹೆಣ್ಣು ಮಗಳ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರೆ ಅದನ್ನು ಒಪ್ಪುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.