– ಶೋಭಾ ಕರಂದ್ಲಾಜೆಗೆ ಹೆಚ್ಚುವರಿ ಖಾತೆಯ ಹೊಣೆ
ನವದೆಹಲಿ: ಪಂಚರಾಜ್ಯಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಸಂಸದರು ಮತ್ತು ಕೇಂದ್ರ ಸಚಿವರಿಗೆ (Union Ministers) 30 ದಿನದಲ್ಲಿ ಮನೆ ಖಾಲಿ ಮಾಡುವಂತೆ ಲೋಕಸಭೆ ಕಾರ್ಯಲಯ ಹೇಳಿದೆ. ಸಂಸದ (BJP MPs) ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನಲೆ ಮನೆ ಖಾಲಿ ಮಾಡುವಂತೆ ಅದು ಸೂಚಿಸಿದೆ.
ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಪಟೇಲ್, ಮಧ್ಯಪ್ರದೇಶದ ರಾಕೇಶ್ ಸಿಂಗ್, ಉದ್ಯಾ ಪ್ರತಾಪ್ ಸಿಂಗ್ ಮತ್ತು ರಿತಿ ಪಾಠಕ್, ರಾಜಸ್ಥಾನದಿಂದ ದಿಯಾ ಕುಮಾರಿ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಛತ್ತೀಸ್‌ಗಢದಿಂದ ಗೋಮತಿ ಸಾಯಿ ಮತ್ತು ಅರುಣ್ ಸಾವ್. ರಾಜ್ಯಸಭಾ ಸಂಸದ ಕಿರೋಡಿ ಲಾಲ್ ಮೀನಾ ಕೂಡ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅಂಗೀಕರಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಬರ ಪರಿಹಾರಕ್ಕೆ ಇನ್ನೆರಡು ದಿನಗಳಲ್ಲಿ ಮಾನದಂಡ ಬಿಡುಗಡೆ: ಚೆಲುವರಾಯಸ್ವಾಮಿ
ಕೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸರೂತಾ ನೀಡಿದ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಗೀಕರಿಸಿದ್ದಾರೆ. ಖಾಲಿಯಾದ ಸಚಿವ ಸ್ಥಾನಗಳ ಪೈಕಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಉಸ್ತುವಾರಿಯನ್ನು ಅರ್ಜುನ್ ಮುಂಡಾ ಅವರಿಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜವಬ್ದಾರಿಯನ್ನು ಶೋಭಾ ಕರಂದ್ಲಾಜೆ ಅವರಿಗೆ ವಹಿಸಲಾಗಿದೆ. ಇದನ್ನೂ ಓದಿ: ಮೂರು ರಾಜ್ಯಗಳ ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರ ನೇಮಿಸಿದ ಹೈಕಮಾಂಡ್
ಅಲ್ಲದೇ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರ ಉಸ್ತುವಾರಿಯನ್ನು ಡಾ. ಭಾರತಿ ಪ್ರವೀಣ್ ಪವಾರ್ ದ್ರೌಪದಿ ಮುರ್ಮು ವಹಿಸಿದ್ದಾರೆ. ತಮ್ಮ ಖಾತೆಗಳ ಜೊತೆಗೆ ಹೆಚ್ಚುವರಿ ನಿಭಾಯಿಸಲು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್ ಹಗರಣ – ಸದನದಲ್ಲಿ ಯತ್ನಾಳ್ ಬಾಂಬ್