ಗಾಂಧೀಜಿ ಶವದ ಪೋಸ್ಟ್ ಮಾರ್ಟಮ್ ಆಗಲಿಲ್ಲ ಯಾಕೆ: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

Public TV
1 Min Read
subramanian swamy 3

– ಗಾಂಧೀಜಿ ಹತ್ಯೆ ಕೇಸ್ ರೀ ಓಪನ್ ಆಗ್ಬೇಕು

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಯಾಕೆ ಒಳಪಡಿಸಲಿಲ್ಲ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, ಗಾಂಧೀಜಿ ಹತ್ಯೆಯ ಪ್ರಕರಣ ಮರು ತನಿಖೆಗೆ ಒಳಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಗಾಂಧೀಜಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿಲ್ಲ ಯಾಕೆ? ಅಭಾ ಮತ್ತು ಮನು ಇಬ್ಬರು ಪ್ರತ್ಯಕ್ಷದರ್ಶಿಗಳಾಗಿದ್ದು, ಸಾಕ್ಷಿಯ ರೂಪದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿಲ್ಲವೇಕೆ? ಶೂಟ್ ಬಳಿಕ ಗೋಡ್ಸೆ ರಿವಲ್ವಾರ್ ನಲ್ಲಿ ಎಷ್ಟು ಗುಂಡುಗಳು ಖಾಲಿಯಾಗಿದ್ದವು? ಇಟಾಲಿಯನ್ ರಿವಾಲ್ವರ್ ಬಗ್ಗೆ ಗೊತ್ತಾಗಲಿಲ್ಲವೇಕೆ ಎಂದು ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರೀ ಓಪನ್ ಮಾಡುವ ಅವಶ್ಯಕತೆ ಇದೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟಿನಲ್ಲಿ ಅಸೋಸಿಯೇಟ್ ಪ್ರೆಸ್ ಇಂಟರ್ ನ್ಯಾಷನಲ್ ಜರ್ನಲಿಸ್ಟ್ ಪೇಜ್ 52ರ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸಂಜೆ 5 ಗಂಟೆ 5 ನಿಮಿಷಕ್ಕೆ ನಾಲ್ಕು ಗುಂಡುಗಳು ಹಾರಿರುವ ಸದ್ದು ಕೇಳಿತು. (ಮೂರು ಗುಂಡು ಎಂದು ಹೇಳಿದ್ದ ಸರ್ಕಾರಿ ವಕೀಲರು ನಾಲ್ಕು ಅಂತ ಕೋರ್ಟಿಗೆ ತಿಳಿಸಿದ್ದರು) ಆದರೆ ನಾಥೂರಾಮ್ ಗೋಡ್ಸೆ ಕೇವಲ ಎರಡು ಗುಂಡು ಹಾರಿಸಿರೋದನ್ನು ತೋರಿಸಿದ್ದಾನೆ. ಅದೇ ಎಪಿಐ ಪತ್ರಕರ್ತ 5.40 ನಿಮಿಷಕ್ಕೆ ಮಹಾತ್ಮ ಗಾಂಧೀಜಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯ್ತು ಎಂದು ಹೇಳುತ್ತಾರೆ. ಅಂದರೆ ಶೂಟ್ ಮಾಡಿದ ನಂತರ ಗಾಂಧೀಜಿ 35 ನಿಮಿಷ ಬದುಕಿದ್ದರು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *