LatestMain PostNational

ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ!

Advertisements

ರಾಂಚಿ: ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವೇದಿಕೆ ಮೇಲೆಯೇ ಕುಸ್ತಿಪಟುವಿಗೆ ಬಿಜೆಪಿ ಸಂಸದ ಬ್ರಿಜುಭೂಷಣ್‌ ಶರಣ್‌ ಸಿಂಗ್‌ ಕಪಾಳಮೋಕ್ಷ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ಕುಸ್ತಿಪಟು ವೇದಿಕೆ ಮೇಲೆ ಆಗಮಿಸಿದ್ದಾರೆ. ಆಗ ಕುಸ್ತಿಪಟುವಿಗೆ ಬಿಜೆಪಿ ಸಂಸದರು ಕಪಾಳಮೋಕ್ಷ ಮಾಡಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಉಪನಾಯಕ?

15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್‌ ಕಾರ್ಯಕ್ರಮಕ್ಕೆ ಸಂಸದ ಸಿಂಗ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಯಸ್ಸು ಮೀರಿದ್ದ ಕಾರಣ ಕುಸ್ತಿಪಟುವೊಬ್ಬರಿಗೆ ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ 15 ವರ್ಷದೊಳಗಿನವರ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತನಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳಲು ಸಂಸದರ ಬಳಿಗೆ ಕುಸ್ತಿಪಟು ತೆರಳಿದ್ದಾರೆ. ವೇದಿಕೆ ಮೇಲೆ ಕುಸ್ತಿಪಟು ಆಗಮಿಸುತ್ತಿದ್ದಂತೆ ಕೋಪಗೊಂಡ ಸಂಸದರು ಆತನ ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಕುಸ್ತಿಪಟು ಮುಜುಗರ ಪಟ್ಟುಕೊಂಡು ವೇದಿಕೆಯಿಂದ ನಿರ್ಗಮಿಸಿದ್ದಾರೆ. ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ತಿಳಿಸಿದ ಸಚಿನ್ ತೆಂಡೂಲ್ಕರ್

Leave a Reply

Your email address will not be published.

Back to top button