ಚಾಮರಾಜನಗರ: ಕೇಸರಿ ಬಣ್ಣ (Saffron Colour) ಬಳಿಯುವ ವಿಚಾರದಲ್ಲಿ ಸರ್ಕಾರಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ (V Shrinivas Prasad) ಸಲಹೆ ನೀಡಿದ್ದಾರೆ.
Advertisement
ಶಾಲೆಗಳಿಗೆ (Schools) ಕೇಸರಿ ಬಣ್ಣ ಬಳಿಯುವ ಸರ್ಕಾರದ (Government Of Karnataka) ಚಿಂತನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರ ಆತುರದ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ. ಕೇಸರಿ ಬಣ್ಣಕ್ಕೆ ಎಲ್ಲರೂ ಗೌರವ ಕೊಡುತ್ತಾರೆ. ಕೇಸರಿಬಣ್ಣ ತ್ಯಾಗದ ಪ್ರತೀಕವಾಗಿದೆ. ಈ ವಿಚಾರವನ್ನು ರಾಜಕೀಯವಾಗಿ (Politics) ಬಳಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿರೋಧ
Advertisement
Advertisement
ಆಲೋಚನೆ ಮಾಡಲಿ:
ಟಿಪ್ಪು ಪ್ರತಿಮೆ (Tippu Statue) ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಟಿಪ್ಪು ಪ್ರತಿಮೆ ಅವರ ಸ್ವಂತಕ್ಕೆ ಮಾಡಿಕೊಳ್ಳಲಿ ಅದರಲ್ಲಿ ತಪ್ಪಿಲ್ಲ, ತೊಂದರೆಯೂ ಇಲ್ಲ. ಟಿಪ್ಪು ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬಾರದೆಂದು ಈಗಾಗಲೇ ತೀರ್ಮಾನವಾಗಿದೆ. ಮುಸ್ಲಿಂ ಸಮುದಾಯದವವರು (Muslim Community) ಟಿಪ್ಪು ಪ್ರತಿಮೆಯನ್ನಾಗಲಿ ಜಯಂತಿಯನ್ನಾಗಲಿ ಮಾಡಿಕೊಳ್ಳಲು ಯಾರ ಅಭ್ಯಂತರವೂ ಇಲ್ಲ. ಆದರೆ ಮುಸ್ಲಿಮರಲ್ಲಿ ಪ್ರತಿಮೆ ಸ್ಥಾಪಿಸುವ ಸಂಸ್ಕೃತಿ ಇಲ್ಲ, ವಿಗ್ರಹ ಆರಾಧಕರು ಅಲ್ಲ ಅವರು ಇನ್ನೊಮ್ಮೆ ಯೋಚನೆ ಮಾಡಲಿ ಎಂದು ತಿಳಿವಳಿಕೆ ನೀಡಿದ್ದಾರೆ.